×
Ad

ಸೇನೆಯು ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸಲು 2-3 ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ ಬಳಸಲಿದೆ: ಲೆ.ಜ.ಅಲೋಕ ಸಿಂಗ್ ಕ್ಲೇರ

Update: 2019-09-26 21:12 IST

ಹಿಸಾರ್(ಹರ್ಯಾಣ),ಸೆ.26: ಭಾರತೀಯ ಸೇನೆಯು ತನ್ನ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮುಂದಿನ ಎರಡು ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ)ಯ ಬಳಕೆಯನ್ನು ಆರಂಭಿಸುವ ಸಾಧ್ಯತೆಯಿದೆ ಮತ್ತು ತನ್ನ ಯಾಂತ್ರೀಕೃತ ಪಡೆಗಳಲ್ಲಿ ಈ ತಂತ್ರಜ್ಞಾನವನ್ನು ಪಡೆಯುವಲ್ಲಿ ಮೊದಲಿಗನಾಗಲಿದೆ ಎಂದು ನೈರುತ್ಯ ಕಮಾಂಡ್‌ನ ಮುಖ್ಯಸ್ಥ ಲೆ.ಜ.ಅಲೋಕ ಸಿಂಗ್ ಕ್ಲೇರ್ ಅವರು ಹೇಳಿದ್ದಾರೆ.

ಬುಧವಾರ ಇಲ್ಲಿ ಸೇನಾ ನೆಲೆಯಲ್ಲಿ ಎಐ ಕುರಿತು ವಿಚಾರ ಸಂಕಿರಣದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಭೂಮಿಯಿಂದ ಆಗಸದವರೆಗೂ ಪ್ರತಿಯೊಂದೂ ಕ್ಷೇತ್ರದಲ್ಲಿ ಎಐ ಸೇನೆಗೆ ನೆರವಾಗಲಿದೆ ಎಂದರು.

ಮಿಲಿಟರಿ ಮತ್ತು ಯಾಂತ್ರೀಕೃತ ಪಡೆಗಳಲ್ಲಿ ಎಐ ಬಳಸಲು ಸೇನೆಯು ಸಂಪೂರ್ಣವಾಗಿ ನೆಟ್‌ವರ್ಕ್ ಕೇಂದ್ರಿತವಾಗಬೇಕಾಗುತ್ತದೆ. ಈಗಿರುವಂತೆ ನಾವು ನೆಟ್‌ವರ್ಕ್ ಸಮರ್ಥರಾಗಿದ್ದೇವೆ ಎಂದು ಕ್ಲೇರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News