×
Ad

ದ್ವೇಷ ರಾಜಕಾರಣದ ಹೊರತು ಬೇರೇನೂ ಇಲ್ಲ: ಕಾರ್ತಿ ಚಿದಂಬರಂ

Update: 2019-09-26 23:08 IST

ಹೊಸದಿಲ್ಲಿ, ಸೆ. 26: ತಿಹಾರ್ ಕಾರಾಗೃಹದಲ್ಲಿ ಗುರುವಾರ ತನ್ನ ತಂದೆ ಪಿ. ಚಿದಂಬರಂ ಅವರನ್ನು ಭೇಟಿಯಾಗಿರುವ ಕಾರ್ತಿ ಚಿದಂಬರಂ, ತನ್ನ ತಂದೆಯನ್ನು ಕಾರಾಗೃಹಕ್ಕೆ ಹಾಕಿರುವ ಹಿಂದೆ ದ್ವೇಷ ರಾಜಕಾರಣ ಇದೆ ಎಂದು ಪುನರುಚ್ಚರಿಸಿದ್ದಾರೆ.

ತಿಹಾರ್ ಕಾರಾಗೃಹದಲ್ಲಿ ತಂದೆಯನ್ನು ಭೇಟಿಯಾದ ಬಳಿಕ ಕಾರಾಗೃಹದ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾರ್ತಿ ಚಿದಂಬರಂ, ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ‘‘ಇದು ದ್ವೇಷ ರಾಜಕಾರಣ ಎಂಬುದನ್ನು ನಾವು ಮತ್ತೆ ಹೇಳುತ್ತೇವೆ. ನನ್ನ ತಂದೆ ಹಾಗೂ ಡಿ.ಕೆ. ಶಿವಕುಮಾರ್ ಯಾವುದೇ ವಿಚಾರಣೆಗೆ ಒಳಗಾಗಿಲ್ಲ. ಯಾವುದೇ ನ್ಯಾಯಾಲಯ ಅವರನ್ನು ಅಪರಾಧಿ ಎಂದು ಪರಿಗಣಿಸಿಲ್ಲ. ಕೇವಲ ತನಿಖೆಯ ನೆಪದಲ್ಲಿ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ’’ ಎಂದು ಅವರು ಹೇಳಿದರು.

 ಇಂತಹ ಘಟನೆಗಳು ದೇಶದ ರಾಜಕೀಯದಲ್ಲಿ ನಕಾರಾತ್ಮಕ ವಾತಾವರಣವನ್ನು ಉಂಟು ಮಾಡುತ್ತದೆ ಎಂದು ಅವರು ತಿಳಿಸಿದರು. ಸರಕಾರವನ್ನು ತೀವ್ರವಾಗಿ ವಿರೋಧಿಸುತ್ತಿರುವ ನಾಯಕರನ್ನು ಕೇಂದ್ರ ಸರಕಾರ ಗುರಿಯಾಗಿರಿಸಿದೆ. ಅಲ್ಲದೆ ಅವರ ಮೇಲೆ ನಕಲಿ ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಕಾರ್ತಿ ಚಿದಂಬರಂ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News