ಬುಲಂದ್‌ಶಹರ್ ಗುಂಪು ಹಿಂಸಾಚಾರ: ಆರೋಪಿ ಯೋಗೇಶ್ ರಾಜ್‌ಗೆ ಜಾಮೀನು
Update: 2019-09-26 23:11 IST
ಪ್ರಯಾಗ್‌ರಾಜ್, ಸೆ. 26: ಪೊಲೀಸ್ ಅಧಿಕಾರಿ ಹಾಗೂ ನಾಗರಿಕನ ಸಾವಿಗೆ ಕಾರಣವಾದ 2018ರ ಬುಲಂದ್‌ಶಹರ್ ಹಿಂಸಾಚಾರ ಪ್ರಕರಣದ ಪ್ರಧಾನ ಆರೋಪಿಯಾಗಿರುವ ಸ್ಥಳೀಯ ಬಜರಂಗದಳದ ನಾಯಕ ಯೋಗೇಶ್ ರಾಜ್‌ಗೆ ಅಲಹಾಬಾದ್ ಉಚ್ಚ ನ್ಯಾಯಾಲಯ ಜಾಮೀನು ನೀಡಿದೆ.
ನ್ಯಾಯಮೂರ್ತಿ ಸಿದ್ಧಾರ್ಥ ಅವರು ಯೋಗೇಶ್ ರಾಜ್‌ಗೆ ಬುಧವಾರ ಜಾಮೀನು ನೀಡಿದರು. ದೂರುದಾರರ ಪರವಾಗಿ ಹಾಜರಾಗಿದ್ದ ವಕೀಲ, ಹಿಂಸಾಚಾರದಲ್ಲಿ ಯೋಗೇಶ್ ರಾಜ್‌ನ ಪಾತ್ರವಿಲ್ಲ. ಈ ಪ್ರಕರಣದಲ್ಲಿ ಇತರ ಆರೋಪಿಗಳು ಕೂಡ ಈಗಾಗಲೇ ಬಿಡುಗಡೆಗೊಂಡಿದ್ದಾರೆ ಎಂದರು. ಮಹಾವ್ ಗ್ರಾಮದ ಹೊರವಲಯದಲ್ಲಿ ಜಾನುವಾರುಗಳ ಕಳೇಬರ ಪತ್ತೆಯಾದ ಬಳಿಕ ಚಿಂಗ್ರಾವತಿ ಪೊಲೀಸ್ ಠಾಣೆಯ ಪರಿಸರದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಸಿಯಾನಾ ಪೊಲೀಸ್ ಠಾಣೆಯಲ್ಲಿ 27 ಜನರು ಹಾಗೂ 50ರಿಂದ 60 ಅಪರಿಚಿತರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿತ್ತು. ಜನವರಿ 3ರಂದು ರಾಜ್‌ನನ್ನು ಪೊಲೀಸರು ಬಂಧಿಸಿದ್ದರು.