×
Ad

ರಿಂಗ್ ಒಳಗೆ ಹಿಜಾಬ್ ಧರಿಸಲು ಹೋರಾಡುವ ಜರ್ಮನಿ ಮಹಿಳಾ ಬಾಕ್ಸರ್ ಝೈನಾ ನಾಸರ್

Update: 2019-09-26 23:22 IST

ಬರ್ಲಿನ್,ಸೆ.26: ಜರ್ಮನಿಯ ಮಹಿಳಾ ಬಾಕ್ಸರ್ ಝೈನಾ ನಾಸರ್ ತಮ್ಮ ಬಾಕ್ಸಿಂಗ್‌ನಿಂದಾಗಿ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಆದರೆ ಅವರು ರಿಂಗ್‌ನಲ್ಲಿ ಹಿಜಾಬ್ ಧರಿಸಲು ನಡೆಸಿದ ಹೋರಾಟವೂ ಅವರಿಗೆ ಅಷ್ಟೇ ಜನಪ್ರಿಯತೆಯನ್ನು ತಂದುಕೊಟ್ಟಿದೆ. ಆನ್‌ಲೈನ್ ವೀಡಿಯೊಗಳನ್ನು ನೋಡಿ ಮಹಿಳಾ ಬಾಕ್ಸಿಂಗ್‌ನತ್ತ ಆಕರ್ಷಿತರಾದ ಸದ್ಯ 21ರ ಹರೆಯಕ್ಕೆ ಕಾಲಿಟ್ಟಿರುವ ಝೈನಾ ಜರ್ಮನಿಯ ಫೆದರ್‌ವೈಟ್ ಚಾಂಪಿಯನ್ ಆಗಿದ್ದು ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಕನಸು ಕಾಣುತ್ತಿದ್ದಾರೆ. ತನ್ನ ಬಾಕ್ಸಿಂಗ್ ಜೀವನದ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಝೈನಾ, ನಾನು ಎರಡು ಬಾರಿ ನನ್ನನ್ನು ಸಾಬೀತುಪಡಿಸಬೇಕಿತ್ತು. ನಾನೊಬ್ಬ ಮಹಿಳಾ ಬಾಕ್ಸರ್ ಮಾತ್ರವಲ್ಲ ನಾನು ಹಿಜಾಬ್ ಕೂಡಾ ಧರಿಸುತ್ತಿದ್ದೆ. ಅಂತ್ಯದಲ್ಲಿ ಎಲ್ಲ ಸವಾಲುಗಳು ನನ್ನನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ತಿಳಿಸಿದ್ದಾರೆ. ಮುಸ್ಲಿಂ ಬಾಕ್ಸರ್‌ಗಳು ರಿಂಗ್‌ನಲ್ಲಿ ಹಿಜಾಬ್ ಹಾಗೂ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಬಟ್ಟೆಯನ್ನು ಧರಿಸಬಹುದು ಎಂದು ಅಂತರ್‌ರಾಷ್ಟ್ರೀಯ ಬಾಕ್ಸಿಂಗ್ ಸಂಘಟನೆ (ಎಐಬಿಎ) ಕಳೆದ ಫೆಬ್ರವರಿಯಲ್ಲಿ ತನ್ನ ಕಾನೂನಿಗೆ ತಿದ್ದುಪಡಿ ತಂದ ನಂತರ ಝೈನಾ ನಾಸರ್ ಕನಸು ನಿಜವಾಗುವತ್ತ ಸಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News