ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನ: ಇಬ್ಬರು ಪೈಲಟ್ ಗಳು ಬಲಿ

Update: 2019-09-27 11:40 GMT

ಹೊಸದಿಲ್ಲಿ, ಸೆ.27: ಭಾರತೀಯ ಸೇನೆಗೆ ಸೇರಿರುವ ಹೆಲಿಕಾಪ್ಟರ್‌ವೊಂದು ಭೂತಾನ್‌ನ ಯೋನ್ಫುಲಾ ಏರ್‌ಪೋಟ್ ಸಮೀಪ ಪತನಗೊಂಡ ಪರಿಣಾಮ ಇಬ್ಬರು ಪೈಲಟ್‌ಗಳು ಮೃತಪಟ್ಟಿರುವ ಆಘಾತಕಾರಿ ಘಟನೆ ಶುಕ್ರವಾರ ವರದಿಯಾಗಿದೆ.

ಭಾರತೀಯ ಸೇನಾ ತರಬೇತಿ ತಂಡದ ಹೆಲಿಕಾಪ್ಟರ್ ಮಂಜು ಕವಿದ ವಾತಾವರಣದಿಂದಾಗಿ ಪತನಗೊಂಡಿದೆ ಎಂದು ಶಂಕಿಸಲಾಗಿದೆ.

ಮಧ್ಯಾಹ್ನ 1 ಗಂಟೆಯ ಬಳಿಕ ಹೆಲಿಕಾಪ್ಟರ್ ರೇಡಿಯೊ ಹಾಗೂ ದೃಶ್ಯ ಸಂಪರ್ಕವನ್ನು ಕಳೆದುಕೊಂಡಿತು. ಹೆಲಿಕಾಪ್ಟರ್ ಖಿರ್ಮು(ಅರುಣಾಚಲ)ಯಿಂದ ಯೋನ್ಫುಲಾಕ್ಕೆ ತೆರಳುತ್ತಿತ್ತು. ಕಾಪ್ಟರ್ ಪತನಗೊಂಡ ತಕ್ಷಣ ಶೋಧ ಕಾರ್ಯ ಆರಂಭಿಸಲಾಗಿದ್ದು, ಅವಶೇಷಗಳು ಪತ್ತೆಯಾಗಿವೆ ಎಂದು ಭಾರತೀಯ ಸೇನೆ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಸಿಂಗಲ್ ಚೀತಾ ಹೆಲಿಕಾಪ್ಟರ್‌ರನ್ನು ಓರ್ವ ಭಾರತೀಯ ಹಾಗೂ ರಾಯಲ್ ಭೂತಾನ್ ಆರ್ಮಿ ಪೈಲಟ್‌ಗಳು ಚಲಾಯಿಸುತ್ತಿದ್ದರು. ಘಟನೆಯಲ್ಲಿ ಇಬ್ಬರೂ ಸಾವನ್ನಪ್ಪಿದ್ದು, ಮೃತಪಟ್ಟವರ ಹೆಸರನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಸೇನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News