ಗೋವಾ: ಸರಕಾರಿ ಕಚೇರಿಗಳಲ್ಲಿ ಅಕ್ಟೋಬರ್ 2ರಿಂದ ಪ್ಲಾಸ್ಟಿಕ್ ನಿಷೇಧ

Update: 2019-09-27 13:58 GMT

ಪಣಜಿ, ಸೆ.27: ಗೋವಾದ ಸರಕಾರಿ ಕಚೇರಿಗಳಲ್ಲಿ ಅಕ್ಟೋಬರ್ 2ರಿಂದ ಒಮ್ಮೆ ಬಳಸುವ ಪ್ಲಾಸ್ಟಿಕ್ ಅನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಗೋವಾ ಸರಕಾರ ಸುತ್ತೋಲೆ ಹೊರಡಿಸಿದೆ.

‘2019ರ ಅಕ್ಟೋಬರ್ 2ರಿಂದ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಾಟಲ್‌ಗಳು, ಗ್ಲಾಸ್, ಪ್ಲೇಟ್ ಇತ್ಯಾದಿಗಳ ಬಳಕೆಯನ್ನು ಸರಕಾರಿ ಕಚೇರಿ, ಕ್ಯಾಂಟೀನ್, ಸಭೆ ಹಾಗೂ ಕಾರ್ಯಕ್ರಮಗಳಲ್ಲಿ ನಿಷೇಧಿಸಲು ಗೋವಾ ಸರಕಾರ ನಿರ್ಧರಿಸಿದೆ ಎಂದು ಸಾಮಾನ್ಯ ಆಡಳಿತ ವಿಭಾಗದ ಕಾರ್ಯದರ್ಶಿ ಶ್ರೀಪಾದ ಅರ್ಲೇಕರ್ ಸೆ.25ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

 ರಾಜ್ಯದಲ್ಲಿ ಪರಿಸರ ಸ್ನೇಹೀ, ಮರುಬಳಕೆಯ ವಸ್ತುಗಳ ಉಪಯೋಗಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಒಪ್ಪಿಗೆ ಪಡೆದು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅರ್ಲೇಕರ್ ಹೇಳಿದ್ದಾರೆ. ಒಮ್ಮೆ ಬಳಕೆ ಮಾಡುವ ಪ್ಲಾಸ್ಟಿಕ್ ವಸ್ತುಗಳು ಹಾಗೂ ಚೀಲಗಳ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸುವ ಹಾಗೂ ನಿಷೇಧ ಉಲ್ಲಂಘಿಸುವವರಿಗೆ 2,500 ರೂ.ನಿಂದ 3 ಲಕ್ಷ ರೂ.ವರೆಗಿನ ದಂಡ ವಿಧಿಸುವ ಮಸೂದೆಗೆ ಕಳೆದ ತಿಂಗಳು ಗೋವಾ ವಿಧಾನಸಭೆಯಲ್ಲಿ ಅನುಮೋದನೆ ದೊರಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News