ಉಪ್ಪಿನಂಗಡಿ - ಕಡಬ ಹೆದ್ದಾರಿಯಲ್ಲಿ ಕಾಡಾನೆ ಪ್ರತ್ಯಕ್ಷ

Update: 2019-09-28 05:27 GMT

ಕಡಬ: ಉಪ್ಪಿನಂಗಡಿ - ಕಡಬ ಹೆದ್ದಾರಿಯ ಬಲ್ಯ ಸಮೀಪ ಶುಕ್ರವಾರ ತಡರಾತ್ರಿ ಕಾಡಾನೆ ಪ್ರತ್ಯಕ್ಷವಾಗಿದ್ದು, ರಾತ್ರಿ ಸಂಚರಿಸುವವರು ಜಾಗ್ರತೆ ವಹಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

ಈ ಹಿಂದೆಯೂ ಅನೇಕ ಬಾರಿ ರಾತ್ರಿ ವೇಳೆಗಳಲ್ಲಿ ಕಾಡಾನೆ, ಕಡವೆ, ಜಿಂಕೆ ಸೇರಿದಂತೆ ಹಲವು ಕಾಡು ಪ್ರಾಣಿಗಳು ಬಲ್ಯ ಹಾಗೂ ಪದವು ಮಧ್ಯೆ ಕಂಡು ಬಂದಿದ್ದು, ಶುಕ್ರವಾರ ತಡರಾತ್ರಿ ಬಲ್ಯದಿಂದ ನೆಲ್ಯಾಡಿಗೆ ತೆರಳುವ ರಸ್ತೆಯಲ್ಲಿ ಕಾಡಾನೆ ಸಂಚರಿಸುವ ದೃಶ್ಯ ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News