ಭಾರತ-ಆರೆಸ್ಸೆಸ್ ಸಮಾನಾರ್ಥಕ ಪದ: ಆರೆಸ್ಸೆಸ್ ನಾಯಕ

Update: 2019-09-28 18:01 GMT

ಹೊಸದಿಲ್ಲಿ, ಸೆ. 28: ಆರೆಸ್ಸೆಸ್ ಹಾಗೂ ಭಾರತ ಸಮಾನಾರ್ಥಕ ಪದಗಳು. ಒಂದು ವೇಳೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಆರೆಸ್ಸೆಸ್ ಮೇಲೆ ಆಕ್ರೋಶಿತರಾಗಿದ್ದಾರೆ ಎಂದರೆ, ಅವರು ಭಾರತದ ಮೇಲೆ ಆಕ್ರೋಶಿತರಾಗಿದ್ದಾರೆ ಎಂದರ್ಥ ಎಂದು ಆರೆಸ್ಸೆಸ್ ‌ ನ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್ ಶನಿವಾರ ಹೇಳಿದ್ದಾರೆ.

 ‘‘ಆರೆಸ್ಸೆಸ್ ಭಾರತದಲ್ಲಿ ಮಾತ್ರ ಇರುವುದು. ಜಗತ್ತಿನ ಯಾವುದೇ ಸ್ಥಳದಲ್ಲಿ ಆರೆಸ್ಸೆಸ್ ಶಾಖೆ ಹೊಂದಿಲ್ಲ. ಒಂದು ವೇಳೆ ಪಾಕಿಸ್ತಾನ ನಮ್ಮೊಂದಿಗೆ ಆಕ್ರೋಶಿತವಾಗಿದೆ ಎಂದರೆ, ಅದು ಭಾರತದೊಂದಿಗೆ ಆಕ್ರೋಶಿತವಾದಂತೆ. ಆರೆಸ್ಸೆಸ್ ಹಾಗೂ ಭಾರತ ಈಗ ಸಮಾನಾರ್ಥಕ ಪದಗಳು. ಭಾರತ ಹಾಗೂ ಆರೆಸ್ಸೆಸ್ ಅನ್ನು ಒಂದು ಎಂದು ಜಗತ್ತು ನೋಡಲು ನಾವು ಬಯಸುತ್ತೇವೆ.’’ ಎಂದು ಅವರು ಹೇಳಿದರು.

ಆರೆಸ್ಸೆಸ್ ಶಿಬಿರಗಳಲ್ಲಿ ಭಯೋತ್ಪಾದಕರನ್ನು ಬೆಳೆಸಲಾಗುತ್ತದೆ ಎಂದು ಈ ಹಿಂದಿನ ಕಾಂಗ್ರೆಸ್ ಸರಕಾರದ ಗೃಹ ಸಚಿವರು ಹೇಳಿಕೆ ನೀಡಿದ್ದರು ಎಂದು ಪಾಕಿಸ್ತಾನದ ಮುಖ್ಯಮಂತ್ರಿ ಇಮ್ರಾನ್ ಖಾನ್ ಶುಕ್ರವಾರ ನಡೆದ ವಿಶ್ವಸಂಸ್ಥೆಯ 74ನೇ ಅಧಿವೇಶದಲ್ಲಿ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಆರೆಸ್ಸೆಸ್ ‌ ನೊಂದಿಗೆ ನಂಟು ಹೊಂದಿದ್ದಾರೆ. ಆರೆಸ್ಸೆಸ್ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಹಾಗೂ ಇಟಲಿಯ ಸರ್ವಾಧಿಕಾರಿ ಬೆನಿಟೊ ಮುಸ್ಸೋಲಿನಿಯಿಂದ ಪ್ರೇರಣೆ ಪಡೆದಿದೆ ಎಂದು ಕೂಡ ಖಾನ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News