ಪಂಜಾಬ್ ವಿ.ವಿ.ಯಲ್ಲಿ ವಿದೇಶಿ ಭಾಷೆಗಳ ಜೊತೆಗೆ ಉರ್ದು ವಿಲೀನ ಪ್ರಸ್ತಾವಕ್ಕೆ ವಿರೋಧ
Update: 2019-09-28 23:32 IST
ಚಂಡಿಗಡ, ಸೆ. 28: ವಿವಿಧ ಭಾಷೆಗಳೊಂದಿಗೆ ಉರ್ದುವನ್ನು ವಿಲೀನಗೊಳಿಸುವ ಪಂಜಾಬ್ ವಿಶ್ವವಿದ್ಯಾನಿಲಯದ ಪ್ರಸ್ತಾಪಕ್ಕೆ ವಿ.ವಿ.ಯ ಉರ್ದು ವಿಭಾಗ ಆಕ್ಷೇಪ ವ್ಯಕ್ತಪಡಿಸಿದೆ. ಉರ್ದು ವಿದೇಶಿ ಭಾಷೆ ಅಲ್ಲ. ಅದು ಹಿಂದಿ ಹಾಗೂ ಪಂಜಾಬಿಯಂತೆ ಭಾರತೀಯ ಭಾಷೆ ಎಂದು ಉರ್ದು ವಿಭಾಗ ಪ್ರತಿಪಾದಿಸಿದೆ.
ರಶ್ಯಾ, ಫ್ರೆಂಚ್, ಜರ್ಮನ್, ಚೈನೀಸ್ ಹಾಗೂ ಟಿಬೇಟ್ ಭಾಷೆಗಳ ವಿಭಾಗಗಳನ್ನು ವಿಲೀನಗೊಳಿಸಿದ ಬಳಿಕ ಸ್ಥಾಪಿಸಿದ ಫಾರೆನ್ ಲಾಂಗ್ವೆಜ್ ಸ್ಕೂಲ್‌ನ ಒಂದು ಭಾಗವಾಗಿ ಉರ್ದು ವಿಭಾಗವನ್ನು ಸೇರಿಸಲು ವಿಶ್ವವಿದ್ಯಾನಿಲಯ ಇತ್ತೀಚೆಗೆ ಪ್ರಸ್ತಾಪಿಸಿತ್ತು ಎಂದು ಉರ್ದು ವಿಭಾಗದ ಸಂಯೋಜಕ ಅಲಿ ಅಬ್ಬಾಸ್ ಶನಿವಾರ ಹೇಳಿದ್ದಾರೆ. ಅಮೀರ್ ಖುಸ್ರೊ ಅವರಿಂದ 13ನೇ ಶತಮಾದ ಎರಡು ದಶಕಗಳಲ್ಲಿ ಭಾರತದಲ್ಲಿ ಉರ್ದು ಹುಟ್ಟಿತು, ಬೆಳೆಯಿತು. ಅನಂತರ ಉರ್ದು ಹಾಗೂ ಹಿಂದಿ ಭಾಷೆ ಯಾವತ್ತೂ ಹಿಂದೆ ತಿರುಗಿ ನೋಡಲಿಲ್ಲ ಎಂದು ಅಬ್ಬಾಸ್ ಪಂಜಾಬ್ ವಿಶ್ವವಿದ್ಯಾನಿಲಯದ ಡಿಯುಐಗೆ ಸಲ್ಲಿಸಿದ ಪತ್ರದಲ್ಲಿ ಹೇಳಿದ್ದಾರೆ.