×
Ad

ಯುಪಿ ಯೋಧಾಕ್ಕೆ ಜಯ

Update: 2019-09-28 23:37 IST

ಪಂಚಕುಳ, ಸೆ.28: ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಪಂದ್ಯದಲ್ಲಿ ಶನಿವಾರ ಹರ್ಯಾಣ ಸ್ಟೀಲರ್ಸ್‌ ವಿರುದ್ಧ ಯುಪಿ ಯೋಧಾ ತಂಡ 37-30 ಅಂತರದಲ್ಲಿ ಜಯ ಗಳಿಸಿದೆ. ಶ್ರೀಕಾಂತ್ ಜಾಧವ್ ಸೂಪರ್ 10 ಮತ್ತು ನಿತೀಶ್ 5 ಪಾಯಿಂಟ್ ಕಲೆ ಹಾಕಿ ತಂಡದ ಗೆಲುವಿಗೆ ನೆರವಾದರು.

ಈ ಗೆಲುವಿನೊಂದಿಗೆ ಯೋಧಾ ಕಳೆದ 8 ಪಂದ್ಯಗಳಲ್ಲಿ 7ನೇ ಜಯ ಗಳಿಸಿದ್ದು ಪ್ಲೇ ಆಫ್ ತಲುಪುವ ಹಾದಿಯಲ್ಲಿದೆ.

    ತಮಿಳು ತಲೈವಾಸ್ ತಂಡವನ್ನು ಇನ್ನೊಂದು ಪಂದ್ಯದಲ್ಲಿ ಫಾರ್ಚೂನ್ ಜೈಂಟ್ಸ್ ತಂಡ 50-21 ಅಂತರದಲ್ಲಿ ಮಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News