×
Ad

ಈರುಳ್ಳಿ ರಫ್ತು ನಿಷೇಧಿಸಿದ ಕೇಂದ್ರ ಸರಕಾರ

Update: 2019-09-29 14:48 IST

ಹೊಸದಿಲ್ಲಿ, ಸೆ.29: ಈರುಳ್ಳಿ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ತಕ್ಷಣದ ಜಾರಿಗೆ ಬರುವಂತೆ ಈರುಳ್ಳಿಗಳ ರಫ್ತು ಮಾಡುವುದನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ರವಿವಾರ ನಿಷೇಧಿಸಿದೆ.

ದಿಲ್ಲಿ  ಮತ್ತು ಮುಂಬೈಯಲ್ಲಿ ಈರುಳ್ಳಿಯ ಬೆಲೆ ಕೆ.ಜಿ.ಗೆ 70-80 ರೂ.ಗೆ ಏರಿಕೆಯಾಗಿದೆ.ಬೆಲೆ ಏರಿಕೆಯನ್ನು ಹತೋಟಿಗೆ ತರಲು ಕೇಂದ್ರ ಸರಕಾರ ಈ ನಿರ್ಧಾರ ಕೈಗೊಂಡಿದೆ.

. "ಮುಂದಿನ ಆದೇಶದವರೆಗೆ ಈರುಳ್ಳಿಯ ರಫ್ತು ನೀತಿಯಲ್ಲಿ ತಿದ್ದುಪಡಿ ತರಲಾಗಿದೆ. ಆದ್ದರಿಂದ ಎಲ್ಲಾ ಬಗೆಯ ಈರುಳ್ಳಿಗಳನ್ನು ರಫ್ತು ಮಾಡುವುದನ್ನು ತಕ್ಷಣದಿಂದಲೇ ನಿಷೇಧಿಸಲಾಗಿದೆ" ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ

"ಎಲ್ಲಾ ವಿಧದ ಈರುಳ್ಳಿಯ  ರಫ್ತು  ಮಾಡುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೇಂದ್ರವು ನಿಷೇಧಿಸಿದೆ." ಎಂದು  ಭಾರತ ಸರ್ಕಾರದ ಪ್ರಧಾನ ವಕ್ತಾರ ಸೀತಾನ್ಶು ಕಾರ್ ಕೂಡ ಟ್ವೀಟ್ ಮಾಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News