ಬೇರೆ ಧರ್ಮದವರನ್ನು ದೂರವಿರಿಸಲು ನವರಾತ್ರಿ ಕಾರ್ಯಕ್ರಮದಲ್ಲಿ ಆಧಾರ್ ಕಡ್ಡಾಯಗೊಳಿಸಿ: ಬಜರಂಗದಳ

Update: 2019-09-29 14:53 GMT

ಹೈದರಾಬಾದ್, ಸೆ. 29: ಹಿಂದೂಯೇತರರ ಪ್ರವೇಶ ತಡೆಯಲು ನವರಾತ್ರಿ ಉತ್ಸವದ ಸಂದರ್ಭದ ಆಚರಣೆಗಳಲ್ಲಿ ಪಾಲ್ಗೊಳ್ಳುವವರಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಬೇಕು ಎಂದು ‘ಗರ್ಭಾ ಹಾಗೂ ದಾಂಡಿಯಾ’ ಆಯೋಜಕರಲ್ಲಿ ಬಜರಂಗದಳ ಆಗ್ರಹಿಸಿದೆ.

ಆಯೋಜಕರಿಗೆ ಬಹಿರಂಗ ಪತ್ರ ಬರೆದಿರುವ ಬಜರಂಗದಳ, ಕಳೆದ ಎರಡು ವರ್ಷಗಳಿಂದ ಇಂತಹ ಕಾರ್ಯಕ್ರಮಗಳಿಗೆ ಹಿಂದೂಯೇತರ ಯುವಕರು ಆಗಮಿಸುತ್ತಿದ್ದಾರೆ ಹಾಗೂ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದೆ. ಮಹಿಳೆಯರನ್ನು ರಕ್ಷಿಸಲು ಪ್ರಯತ್ನಿಸುವ ವ್ಯಕ್ತಿಗಳ ಮೇಲೆ ಅವರು ಹಲ್ಲೆ ನಡೆಸುತ್ತಿದ್ದಾರೆ. ಅಮಾಯಕ ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಅವರು ಬಳಸಿಕೊಳ್ಳುತ್ತಿದ್ದಾರೆ ಎಂದು ಅದು ಹೇಳಿದೆ.

 ಹಿಂದುಯೇತರ ಬೌನ್ಸರ್‌ಗಳನ್ನು ಉದ್ಯೋಗಿಗಳನ್ನಾಗಿ ನೇಮಕ ಮಾಡುವುದರಿಂದ ಕೂಡ ಕಾರ್ಯಕ್ರಮ ಆಯೋಜಕರು ದೂರವಿರಬೇಕು ಎಂದು ಬಜರಂಗ ದಳ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News