ಟ್ವಿಟರ್ ಟ್ರೆಂಡಿಂಗ್ ನಲ್ಲಿ ನಂಬರ್ 1 ಆದ #GetWellSoonModia

Update: 2019-09-29 17:31 GMT

ಸರಕಾರದ ಎಲ್ಲಾ ತಪ್ಪುಗಳನ್ನು, ದೇಶದ ನೈಜ ಸಮಸ್ಯೆಗಳನ್ನು ಮರೆಮಾಚಿ ರಿಯಾಲಿಟಿ ಶೋಗಳ ಚಾನೆಲ್ ಗಳಂತೆ ಕೆಲಸ ಮಾಡುತ್ತಿರುವ ಎಲ್ಲಾ ರಾಷ್ಟ್ರೀಯ ಮಾಧ್ಯಮಗಳಿಗೆ ಇಂದು ಟ್ವಿಟರಿಗರು #GetWellSoonModia ಹ್ಯಾಶ್ ಟ್ಯಾಗ್ ಅಭಿಯಾನದ ಮೂಲಕ ಮಂಗಳಾರತಿ ಎತ್ತಿದ್ದಾರೆ.

ರಾಜಕೀಯ ವಿಡಂಬನೆಗಳ, ವ್ಯಂಗ್ಯಗಳ ಮೂಲಕ ಪ್ರಸಿದ್ಧವಾದ ‘ಪೀಯಿಂಗ್ ಹ್ಯೂಮನ್’ ಯುಟ್ಯೂಬ್ ಚಾನೆಲ್ ಈ ಹ್ಯಾಶ್ ಟ್ಯಾಗನ್ನು ಟ್ರೆಂಡ್ ಮಾಡುವಂತೆ ಕರೆ ನೀಡಿತ್ತು. ಇದಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿ ಇದೀಗ ಟ್ವಿಟರ್ ನಲ್ಲಿ #GetWellSoonModia ನಂಬರ್ 1 ಟ್ರೆಂಡಿಂಗ್ ನಲ್ಲಿದೆ.

‘ಪೀಯಿಂಗ್ ಹ್ಯೂಮನ್’ ಯುಟ್ಯೂಬ್ ಈ ಹಿಂದೆ ಹಲವು ಬಾರಿ ಮೋದಿಯವರನ್ನು ಟೀಕಿಸಿದ್ದು ಮಾತ್ರವಲ್ಲದೆ, ಎಲ್ಲಾ ರಾಜಕೀಯ ನಾಯಕರ ತಪ್ಪುಗಳನ್ನು ವ್ಯಂಗ್ಯದ ಮೂಲಕ ವೀಕ್ಷಕರ ಮುಂದಿಟ್ಟಿತ್ತು. ಇದೀಗ ಇದೇ ಯುಟ್ಯೂಬ್ ಚಾನೆಲ್ ನೀಡಿರುವ ಕರೆಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

#GetWellSoonModia ಹ್ಯಾಶ್ ಟ್ಯಾಗ್ ನ ಕೆಲ ಝಲಕ್ ಗಳು ಈ ಕೆಳಗಿವೆ…

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News