ಡಿಅನ್ನಾ ಪ್ರೈಸ್ ಹ್ಯಾಮರ್ ವಿಶ್ವ ಕಿರೀಟ ಧರಿಸಿದ ಅಮೆರಿಕದ ಮೊದಲ ಮಹಿಳೆ

Update: 2019-09-29 18:24 GMT

ವಿಶ್ವ ಅಥ್ಲೆಟಿಕ್ಸ್ ಚ್ಯಾಂಪಿಯನ್‌ಶಿಪ್‌

ದೋಹಾ,ಸೆ.29: ವಿಶ್ವ ಅಥ್ಲೆಟಿಕ್ಸ್ ಚ್ಯಾಂಪಿಯನ್‌ಶಿಪ್‌ನಲ್ಲಿ ಶನಿವಾರ ನಡೆದ ಹ್ಯಾಮರ್ ಎಸೆತ ಸ್ಪರ್ಧೆಯಲ್ಲಿ ಡಿಅನ್ನಾ ಪ್ರೈಸ್ ಪ್ರಶಸ್ತಿ ಜಯಿಸುವ ಮೂಲಕ ಈ ಸಾಧನೆ ಮಾಡಿದ ಅಮೆರಿಕದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 73.77ಮೀ. ದೂರಕ್ಕೆ ಹ್ಯಾಮರ್ ಎಸೆಯುವ ಮೂಲಕ ಅರ್ಹತಾ ಸುತ್ತಿಗೇರಿದ ಪ್ರೈಸ್, ಪ್ರಶಸ್ತಿ ಹಂತದಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಗಿದ್ದ ಅನಿತಾ ಲೊಡಕ್ರಿಸ್ಕ್ ಗಾಯದ ಸಮಸ್ಯೆಯಿಂದ ಸ್ಪರ್ಧೆಯಿಂದ ಹೊರಗುಳಿದ ಲಾಭವನ್ನು ಪಡೆದು ಮೂರನೇ ಪ್ರಯತ್ನದಲ್ಲಿ 77.54ಮೀ. ದೂರಕ್ಕೆ ಎಸೆದರು. ಜುಲೈಯಲ್ಲಿ ನಡೆದ ಯು.ಎಸ್ ಟೈಟಲ್‌ನಲ್ಲಿ 78.24ಮೀ. ದೂರ ಎಸೆಯುವ ಮೂಲಕ ಉತ್ತರ ಅಮೆರಿಕದಲ್ಲಿ ದಾಖಲೆ ಬರೆದ 26ರ ಹರೆಯದ ಪ್ರೈಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆಲ್ಲಲು ಸಮರ್ಥವಾಗಿದ್ದೇನೆ ಎಂದು ಸಾಬೀತುಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News