ಯುಎಇ: ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯಿಂದ ರಕ್ತದಾನ ಶಿಬಿರ

Update: 2019-09-30 11:05 GMT

ದುಬೈ: ಮರ್ಹಬಾ ಗ್ರೂಪ್ಸ್ ಆಫ್ ಫಾರ್ಮಸಿ ರಾಸಲ್ ಕೈಮಾ, ಅಲ್-ಜನ್ನತ್  ಫೌಂಡೇಶನ್ ಯುಎಇ, ಬದ್ರಿಯ ಫ್ರೆಂಡ್ಸ್ ದುಬೈ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಸಹಯೋಗದಲ್ಲಿ ದುಬೈ ರಾಸಲ್ ಕೈಮಾದಲ್ಲಿ ಪ್ರಪ್ರಥಮ ಬಾರಿಗೆ ಬೃಹತ್ ರಕ್ತದಾನ ಶಿಬಿರ ನಡೆಯಿತು.

ರಕ್ತದಾನ ಶಿಬಿರವನ್ನು ನವಾಝ್ ಸಜಿಪ ಉದ್ಘಾಟಿಸಿದರು. ರಕ್ತದಾನ ಶಿಬಿರದಲ್ಲಿ  ಅನಿವಾಸಿ ಭಾರತೀಯ ಉದ್ಯಮಿ ಗಳು, ಉದ್ಯೋಗಿಗಳು ಹಾಗೂ ವಿದೇಶಿಯರು  ಸೇರಿದಂತೆ ಸುಮಾರು 53 ಮಂದಿ ರಕ್ತದಾನ ಮಾಡಿದರು. 

ಪ್ರಸ್ತಾವಿಕ ಭಾಷಣದಲ್ಲಿ ಸೀನಾನ್ ಅರಫಾ, ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯು ಕೇವಲ ಬೆರಳೆಣಿಕೆಯ ಜನರಿಂದ ಶುರುವಾದ ರಕ್ತದಾನ ಕಾರ್ಯಕ್ರಮವು ಇಂದು ದೇಶ ವಿದೇಶಗಳಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ವತಿಯಿಂದ ಜನರ ಹಾಗೂ ರೋಗಿಗಳ ಅಗತ್ಯವನ್ನು ಪೂರೈಸುವಲ್ಲಿ ಸಹಕಾರಿಯಾಗಿವೆ. ರಕ್ತದಾನಿಗಳ  ಸಹಕಾರ ಮುಂದೆಯೂ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯೊಂದಿಗೆ ಸದಾ ಇರಲಿ.” ಎಂದರು.

ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಅಲ್ ಸಕ್ರ್ ಬ್ಲಡ್ ಬ್ಯಾಂಕ್ ರಾಸಲ್ ಕೈಮಾ ಇದರ ಮುಖ್ಯಸ್ಥೆ ಕೌಲಾ ಮಾತನಾಡುತ್ತಾ ದೂರದ ದುಬೈಯಿಂದ ಬಂದು ರಕ್ತದಾನ ಶಿಬಿರವನ್ನು ಆಯೋಜಿಸಿದ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ರಕ್ತದಾನ ಶಿಬಿರವನ್ನು ಪ್ರಶಂಶಿಸಿತ್ತಾ ಮುಂದೆಯೂ ಕೂಡ ನಿಮ್ಮ ಸಹಕಾರ ನಮ್ಮೊಂದಿಗೆ ಅತ್ಯಗತ್ಯ ಹಾಗೂ ಬೃಹತ್ ರಕ್ತ ಸಂಗ್ರಹಣೆ ಮಾಡಲು ಸಹಕರಿಸಿದ ಎಲ್ಲಾ ಸಂಘ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.

ರಕ್ತದಾನ ಶಿಬಿರದ ಮುಖ್ಯ ಅತಿಥಿಗಳಾಗಿ ಬದ್ರಿಯ ಫ್ರೆಂಡ್ಸ್ ಯು.ಎ.ಇ  ಅಧ್ಯಕ್ಷ ಇರ್ಷಾದ್ ಓರಿಯನ್, ಎಸ್. ಕೆ. ಸಮೀರ್ ಸುರಿಕುಮೇರ್, ಅನ್ವರ್ ಸಾದತ್, ಮೊಹಮ್ಮದ್ ಆಶಿಕ್ ಬಂದರ್ ಖಜಾಂಜಿ ಹಿದಾಯ ಫೌಂಡೇಶನ್ ಯು.ಎ.ಇ  ಉಪಸ್ಥಿತರಿದ್ದರು.

ವೇದಿಕೆಯಲ್ಲಿ ನೌಷಾದ್ ಸಾಲ್ಮರ, ಅಶ್ರಫ್ ಪಜೀರ್, ಶಫಾಫ್ ಗಂಜಿಮಠ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಆಯೋಜಿಸಿದ ಮರ್ಹಬಾ ಗ್ರೂಪ್ಸ್ ಆಫ್ ಫಾರ್ಮಸಿ ರಾಸಲ್ ಕೈಮಾ, ಅಲ್-ಜನ್ನತ್  ಫೌಂಡೇಶನ್ ಯು.ಎ.ಇ, ಬದ್ರಿಯ ಫ್ರೆಂಡ್ಸ್ ದುಬೈ ಹಾಗೂ ಸಹಕರಿಸಿದ ರಕ್ತದಾನಿಗಳಿಗೆ ಮರ್ಹಬಾ ಫಾರ್ಮಸಿ ರಾಸಲ್ ಕೈಮಾ ಫಾಹಿಮ್ ಹಾಗೂ  ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಯು.ಎ.ಇ ಇದರ ಮುಖ್ಯ ಕಾರ್ಯನಿರ್ವಾಹಕರಾದ ನಝೀರ್ ಬಿಕರ್ನಕಟ್ಟೆ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಯು.ಎ.ಇ ಇದರ ಮುಖ್ಯ  ಸಲಹೆಗಾರರಾದ ಅನ್ವರ್ ಸಾದತ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News