ಎಸ್ಸೆಸ್ಸೆಫ್ ನಿಂತಿಕ್ಕಲ್ಲು ಸೆಕ್ಟರ್ ವತಿಯಿಂದ 'ಉಲಾಝ್ - 2019'

Update: 2019-09-30 17:45 GMT

ಸುಳ್ಯ, ಸೆ.30: ಎಸ್ಸೆಸ್ಸೆಫ್ ನಿಂತಿಕ್ಕಲ್ಲು ಸೆಕ್ಟರ್ ವತಿಯಿಂದ ನವ ಬದುಕಿಗೊಂದು ದಿಕ್ಸೂಚಿ 'ಉಲಾಝ್ - 2019' ಕಾರ್ಯಕ್ರಮವು ನಿಂತಿಕ್ಕಲ್ಲು ಎಸ್ಸೆಸ್ಸೆಫ್ ಕಚೇರಿಯಲ್ಲಿ ಸೆಕ್ಟರ್ ಅಧ್ಯಕ್ಷ ಜಬ್ಬಾರ್ ಹನೀಫಿ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಖಲೀಲ್ ಝುಹುರಿ ನೆಕ್ಕಿಲ ಉದ್ಘಾಟಿಸಿದರು. ಝಿಯಾದ್ ಸಖಾಫಿ ಬಾರೆಬೆಟ್ಟು ಅವರು, 'ಸುನ್ನತ್ ಹಾಗೂ ದಾಈ' ಎಂಬ ವಿಷಯದ ಕುರಿತು ತರಗತಿ ನಡೆಸಿದರು.

ಬಳಿಕ, ಪ್ರವಾಹ ಪೀಡಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸಿದ್ದ ಸೆಕ್ಟರ್ ವ್ಯಾಪ್ತಿಯ ಕಾರ್ಯಕರ್ತರಾದ ಅಬೂಬಕ್ಕರ್ ನೆಕ್ಕಿಲ, ರಝಾಕ್ ಕೆ.ಎಚ್ ನೆಕ್ಕಿಲ, ಅಬೂತಾಹಿರ್ ನೆಕ್ಕಿಲ, ಸಂಶುದ್ದೀನ್ ನೆಕ್ಕಿಲ, ಮುಸ್ತಫಾ ಸಮಹಾದಿ, ರಿಯಾಝ್ ನೆಕ್ಕಿಲ, ಸ್ವಾದಿಕ್ ನೆಕ್ಕಿಲ ಅವರನ್ನು ಸೆಕ್ಟರ್ ಸಮಿತಿ ವತಿಯಿಂದ ಅಭಿನಂದಿಸಲಾಯಿತು. 

ಕಾರ್ಯಕ್ರಮದಲ್ಲಿ ನಿಂತಿಕಲ್ಲು ಬದ್ರಿಯಾ ಜುಮ್ಮಾ ಮಸೀದಿ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಪೊಲಾಜೆ, SYS ಕಾರ್ಯಕರ್ತ ಅಝೀಝ್ ಮುಸ್ಲಿಯಾರ್ ಕಲ್ಲೇರಿ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ನಿಂತಿಕಲ್ಲು ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ರಹ್ಮಾನ್ ಟಿ.ಎಸ್ ಎಣ್ಮೂರು ಸ್ವಾಗತಿಸಿ, ಸೆಕ್ಟರ್ ಪ್ರ. ಕಾರ್ಯದರ್ಶಿ ರಿಯಾಝ್ ನೆಕ್ಕಿಲ ವಂದಿಸಿದರು.       

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News