ಉತ್ತಮ ಮೌಲ್ಯಗಳಿಂದ ದೇಶ ಸಮೃದ್ಧಿ: ಅತೀಕುರ್ರಹ್ಮಾನ್

Update: 2019-10-01 14:55 GMT

ಮಲ್ಪೆ, ಅ.1: ಕುರಾನ್ ಶಿಕ್ಷಣಗಳ ಆಧಾರದಲ್ಲಿ ಸಮಾಜದ ನಿರ್ಮಾಣ ನಮ್ಮ ಕರ್ತವ್ಯವಾಗಿದೆ. ನಮ್ಮ ವೈಯಕ್ತಿಕ ಇಚ್ಛೆ, ಆಯ್ಕೆಗಳನ್ನು ದೇವರ ಇಚ್ಛೆಗಳಿಗಾಗಿ ತ್ಯಾಗ ಮಾಡಬೇಕಾಗಿದೆ. ಸಂಕೀರ್ಣ ಸಮಸ್ಯೆಗಳಿಂದ ತತ್ತರಿಸುತ್ತಿ ರುವ ಸಮಾಜದ ಬಗ್ಗೆ ನಿಷ್ಕ್ರಿಯತೆಯನ್ನು ತೊರೆದು ಕೂಡಲೇ ಗಮನ ಹರಿಸುವ ಅಗತ್ಯವಿದೆ ಎಂದು ಇಸ್ಲಾಮಿ ಅರ್ಥಶಾಸ್ತ್ರಜ್ಞ ಅತೀಕುರ್ರಹ್ಮಾನ್ ವಾನಿ ಯಂಬಾಡಿ ಹೇಳಿದ್ದಾರೆ.

ಜಮಾಅತೆ ಇಸ್ಲಾಮಿ ಹಿಂದ್ ಮಲ್ಪೆ ಇದರ ವತಿಯಿಂದ ಮಲ್ಪೆ ಜುಮಾ ಮಸೀದಿಯಲ್ಲಿ ರವಿವಾರ ನಡೆದ ಸಮುದಾಯಿಕ ಸಭೆಯಲ್ಲಿ ಸಮಾಜ ನಿರ್ಮಾಣ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ದ್ವೇಷದ ಬದಲಿಗೆ ಪ್ರೀತಿ, ಅಶ್ಲೀಲತೆಯ ಬದಲಿಗೆ ಲಜ್ಜೆ- ಮಾನ, ಹಿಂಸೆಯ ಬದಲಿಗೆ ಅಹಿಂಸೆ, ಅಮಾನವೀಯತೆಗೆ ಮಾನವೀಯತೆ ಮತ್ತು ಅಸ್ಪೃಶ್ಯತೆ, ಅಸಮಾನತೆ, ಬಡ್ಡಿ, ಶೋಷಣೆ, ಜೂಜು, ಮಾದಕ ವ್ಯಸನ ಮುಂತಾದ ಅನ್ಯಾಯದ ವ್ಯವಸ್ಥೆಯ ಬದಲಿಗೆ ನ್ಯಾಯದ ವ್ಯವಸ್ಥೆಯ ಸ್ಥಾಪನೆಗಾಗಿ ಶ್ರಮಿಸ ಬೇಕಾಗಿದೆ ಎಂದರು.

ದಬ್ಬಾಳಿಕೆಯ ವ್ಯವಸ್ಥೆಗೆ ಪ್ರಕೃತಿ ಹೆಚ್ಚು ಕಾಲ ಅವಕಾಶ ನೀಡುವುದಿಲ್ಲ. ಅದಕ್ಕಾಗಿ ನಾವು ಮಾತ್ರ ಸಾಮಾಜಿಕ ಜವಾಬ್ದಾರಿಯನ್ನು ಅರಿಯಬೇಕು. ಇದಕ್ಕೆ ಮಂತ್ರ ಪಠಿಸುವುದು, ಕೆಲ ವಿಶಿಷ್ಟ ಕರ್ಮಗಳನ್ನು ಆಚರಿಸುವುದೇ ಪರಿಹಾರ ಎಂಬುದಾಗಿ ಇಸ್ಲಾಮ್ ಕಲಿಸುವುದಿಲ್ಲ. ಉತ್ತಮ ಮೌಲ್ಯಗಳನ್ನು ಮೈಗೂಡಿಸಿಕೊಂಡು ರಂಗಕ್ಕಿಳಿದರೆ, ನಮ್ಮ ದೇಶ ಮತ್ತೆ ಸಮೃದ್ಧಿ ಹೊಂದುವುದ ರಲ್ಲಿ ಯಾವುಗೇ ಸಂಶಯ ಬೇಡ ಎಂದು ಅವರು ಅಭಿಪ್ರಾಯ ಪಟ್ಟರು.

ಸಮಾಜ ನಿರ್ಮಾಣಕ್ಕಾಗಿ ನೀಡುವ ಕೊಡುಗೆಯೇ ನಮ್ಮ ಮೋಕ್ಷವನ್ನು ಅವಲಂಬಿಸಿದೆ. ದುರ್ಬಲ- ಸಬಲ, ಬಡವ- ಬಲ್ಲಿದ, ಕರಿಯ ಬಿಳಿಯ ಎಲ್ಲರಿಗೂ ಒಂದೇ ಸಿದ್ಧಾಂತ. ನಿಜವಾದ ದೇವಭಯ ಮೈಗೂಡಿಸಿ ಚಾರಿತ್ರ ಅಭಿವೃದ್ಧಿ ಪಡಿಸಿದಾಗಲೇ ದೊಡ್ಡ ಸಾಧನೆ ಮಾಡಲು ಸಾಧ್ಯ. ಅಂಧಕಾರದಿಂದ ಪ್ರಕಾಶದೆಡೆಗೆ ತರುವ ಕುರಾನ್‌ನ ಶಿಕ್ಷಣಗಳು ಮುಸ್ಲಿಮರಿಗಾಗಿ ಮಾತ್ರವಿರುವ ಸೊತ್ತು ಅಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News