ಪಲಿಮಾರು: ಔಷಧೀಯ ವನ ನಿರ್ಮಾಣ

Update: 2019-10-01 15:13 GMT

ಪಡುಬಿದ್ರೆ, ಅ.1: ಉಡುಪಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು ವತಿಯಿಂದ ಪಲಿಮಾರು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಆವರಣದಲ್ಲಿ ಔಷಧೀಯ ಸಸ್ಯಗಳನ್ನು ನೆಡುವ ಕಾರ್ಯಕ್ರಮ ವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

 ಶಾಲ್ಮಲಿ, ಪುತ್ರಂಜೀವ, ಅಸನ, ಬಿಲ್ವಪತ್ರೆ, ಅರ್ಕ, ಅರಿಷ್ಟಕ ಮುಂತಾದ ಔಷಧೀಯ ಸಸ್ಯಗಳನ್ನು ಆಸ್ಪತ್ರೆಯ ಆವರಣದಲ್ಲಿ ನೆಟ್ಟು, ಅದರ ಮಹತ್ವವನ್ನು ಸಾರ್ವಜನಿಕರಿಗೆ ವಿವರಿಸಲಾಯಿತು. ಕಾಲೇಜಿನ ದ್ರವ್ಯಗುಣ ವಿಭಾಗದ ಸಹಪ್ರಾಧ್ಯಾಪಕಿ ಡಾ.ಸುಮ ಮಲ್ಯ, ಉಪನ್ಯಾಸಕಿ ಡಾ.ತೇಜಸ್ವಿ ನಾಯ್ಕ್ಕಿ ಗಿಡಗಳ ಮಹತ್ವ ವಿವರಿಸಿದರು.

ಸರಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪೂರ್ಣಿಮಾ ಪೈ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್, ಗ್ರಾಪಂ ಸದಸ್ಯರಾದ ಗಾಯತ್ರಿ ಪ್ರಭಪ, ಸತೀಶ್ ದೇವಾಡಿಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News