ಅನರ್ಹ ಶಾಸಕರಾದರೆ ಸಚಿವರಾಗಲಿದ್ದಾರೆ: ಸಚಿವ ಎಚ್ ನಾಗೇಶ್

Update: 2019-10-01 16:53 GMT

ಬೆಳ್ತಂಗಡಿ, ಅ.1: ಅನರ್ಹ ಶಾಸಕರಿಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗಲಿದ್ದು ಮುಂದೆ ನಡೆಯುವ ಉಪಚುನಾವಣೆಯಲ್ಲಿ ಎಲ್ಲ ಅನರ್ಹ ಶಾಸಕರು ಚುನಾಯಿತರಾಗಿ ಯಡಿಯೂರಪ್ಪಸರಕಾರದಲ್ಲಿ ಸಚಿವರಾಗಲಿದ್ದಾರೆ ಎಂದು ರಾಜ್ಯ ಅಬಕಾರಿ ಸಚಿವ ಎಚ್ ನಾಗೇಶ್ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಂಗಳವಾರ ಆಗಮಿಸಿ ದೇವರ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು.
ಅನರ್ಹ ಶಾಸಕರು ತಮ್ಮದೇ ಆದ ಬೇರೆ ಬೇರೆ ಕಾರಣಗಳಿಂದಾಗಿ ಅವರವರ ಪಕ್ಷಗಳಿಗೆ ರಾಜೀನಾಮೆ ನೀಡಿದ್ದಾರೆ. ಅವರೆಲ್ಲರಿಗೂ ಸುಪ್ರೀಂ ಕೋರ್ಟಿನಲ್ಲಿ ನ್ಯಾಯ ಸಿಗಲಿದೆ. ಮುಂದಿನ ಚುನಾವಣೆಯಲ್ಲಿ ಇವರು ಸ್ಪರ್ಧಿಸುವುದು ಖಚಿತ ಹಾಗೂ ಎಲ್ಲರೂ ಗೆದ್ದು ಸಚಿವರಾಗುತ್ತಾರೆ ಎಂದು ಅವರು ವಿವರಿಸಿದರು.

ರಾಜ್ಯ ಸರಕಾರದ ಅಬಕಾರಿ ಇಲಾಖೆ ಮದ್ಯಮಾರಾಟದ ಗುರಿಯನ್ನು ನಿಗಧಿಪಡಿಸಿದ್ದು ಅದನ್ನು ಸಾಧಿಸುವನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದ ಸಚಿವರು ಹೊಸದಾಗಿ ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡುವ ಯಾವುದೇ ಪ್ರಸ್ತಾವ ಇಲ್ಲ. ಮದ್ಯ ಮಾರಾಟ ಸರಕಾರದ ಆದಾಯದ ಮುಖ್ಯ ಮೂಲವಾಗಿದ್ದು ಯಾರಿಗೂ ಮದ್ಯಪಾನ ಮಾಡುವಂತೆ ಒತ್ತಾಯಿಸುವುದಿಲ್ಲ. ಅದು ಅವರವರ ವಿವೇಚನೆಗೆ ಬಿಟ್ಟ ವಿಚಾರ ವಾಗಿದೆ ಎಂದರು.

ಸಚಿವರೊಂದಿಗೆ ಅವರ ಪತ್ನಿ ಹಾಗೂ ಕುಟುಂಬಸ್ಥರಿದ್ದರು. ಅಬಕಾರಿ ಇಲಾಖೆಯ ಅಧೀಕ್ಷಕಿ ಶೈಲಜ ಎ. ಕೋಟೆ, ಉಪ ಅಧೀಕ್ಷಕರಾದ ಪದ್ಮ ವಿ, ಬೆಳ್ತಂಗಡಿ ವಲಯದ ಸೌಮ್ಯಲತ ಉಪಸ್ಥಿತರಿದ್ದರು. 

ಸಚಿವರು ಇದೇ ಸಂದರ್ಭ ಕ್ಷೇತ್ರದ ಧಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News