ಎಸ್ಸೆಸ್ಸೆಫ್ ಮುಖವಾಣಿ 'ಇಶಾರ' ಅಭಿಯಾನಕ್ಕೆ ದ.ಕ. ಜಿಲ್ಲೆಯಲ್ಲಿ ಚಾಲನೆ

Update: 2019-10-01 17:22 GMT

ಮಂಗಳೂರು, ಅ.1: ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಇದರ ಮುಖವಾಣಿ 'ಇಶಾರ' ಪತ್ರಿಕೆಯ ಚಂದಾ ಅಭಿಯಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಾಲನೆ ನೀಡಲಾಯಿತು.

ಕರ್ನಾಟಕ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಸುನ್ನಿ ಕೋ-ಆರ್ಡಿನೇಶನ್ ಸಮಿತಿ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ ಬಂಟ್ವಾಳ, ಎಸ್ಸೆಸ್ಸೆಫ್ ಮಾಜಿ ರಾಜ್ಯಾಧ್ಯಕ್ಷ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಜಂಇಯ್ಯತುಲ್ ಉಲಮಾ ರಾಜ್ಯ ಕಾರ್ಯದರ್ಶಿ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ, ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನಿ ಕಾಮಿಲ್, ಸಾದಾತ್ ತಂಙಳ್ ಕರ್ವೇಲು, ರಾಜ್ಯ ಇಹ್ಸಾನ್ ಕಾರ್ಯದರ್ಶಿ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು, ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಸೇರಿ ಅನೇಕ ನಾಯಕರು ವಿವಿಧೆಡೆ ನಡೆದ ಚಂದಾ ಅಭಿಯಾನದಲ್ಲಿ ಚಂದಾ ಸ್ವೀಕರಿಸಿದರು.

ಚಂದಾ ಅಭಿಯಾನದ ಮುಂದುವರಿದ ಭಾಗವಾಗಿ ಅಕ್ಟೋಬರ್ 2 ರಂದು ದ.ಕ.ಜಿಲ್ಲಾ ಸಮಿತಿ ನಾಯಕರು, ಅ.3 ರಂದು ಝೋನ್ ನಾಯಕರು, ಅ.4 ರಂದು ಡಿವಿಶನ್ ನಾಯಕರು, ಅ.5 ರಂದು ಸೆಕ್ಟರ್ ನಾಯಕರು, ಅ.6 ರಂದು ಶಾಖಾ ನಾಯಕರು ಚಂದಾ ಪಡೆಯಲಿದ್ದಾರೆ. ಅಕ್ಟೋಬರ್ 7 ರಿಂದ 15 ರ ತನಕ ಜಿಲ್ಲಾ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಇಶಾರ ಅಭಿಯಾನ ನಡೆಯಲಿದೆ ಎಂದು ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್ ನಂದಾವರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News