ಗಾಂಧಿ ಜಯಂತಿ: ಕನ್ಯಾನ ಎಸ್ಸೆಸ್ಸೆಫ್ ನಿಂದ ಮಾದಕ ದ್ರವ್ಯ ವಿರುದ್ಧ ಜನ ಜಾಗೃತಿ ಜಾಥಾ

Update: 2019-10-02 08:30 GMT

ವಿಟ್ಲ, ಅ.2: ಗಾಂಧಿ ಜನ್ಮ ದಿನಾಚರಣೆಯ ಪ್ರಯುಕ್ತ ಎಸ್ಸೆಸ್ಸೆಫ್ ಕನ್ಯಾನ ಸೆಕ್ಟರ್ ವತಿಯಿಂದ ಮಾದಕ ದ್ರವ್ಯ ವಿರುದ್ಧ ಕನ್ಯಾನ‌ ಪೇಟೆಯಿಂದ ಕೆಳಗಿನ ಪೇಟೆಯವರೆಗೆ ಬುಧವಾರ ಜನ ಜಾಗೃತಿ ಜಾಥಾ ನಡೆಯಿತು.

ಕಾರ್ಯಕ್ರಮವನ್ನು ಮಾತನಾಡಿದ ಕ್ಯೂ ಟೀಂ ಎಸ್ಸೆಸ್ಸೆಫ್ ವಿಟ್ಲ ಡಿವಿಜನ್ ಕಂಟ್ರೋಲರ್ ಕೆ.ಎಂ.ಅಶ್ರಫ್ ಸಖಾಫಿ ಕನ್ಯಾನ 'ಗಾಂಧೀಜಿಯ ಕನಸಿನ ಭಾರತ ಸಾಕ್ಷಾತ್ಕಾರಗೊಳ್ಳಬೇಕು. ಭವಿಷ್ಯಕ್ಕೆ ಮಾರಕವಾದ ಮಾದಕ ವಸ್ತುಗಳ ಹಾವಳಿಯನ್ನು ತಡೆಗಟ್ಟಬೇಕು. ಮಾದಕ ದ್ರವ್ಯ ವಿರುದ್ಧ ಎಸ್ಸೆಸ್ಸೆಫ್ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಈ ಹೋರಾಟ  ಮುಂದುವರಿಯಲಿದೆ  ಎಂದರು.

ಸೆಕ್ಟರ್ ಅಧ್ಯಕ್ಷ ಎಂ.ಐ.ಎಂ.ಅಶ್ರಫ್ ಸಖಾಫಿ ದುಆಗೈದರು.

ನೂರಕ್ಕೂ ಮಿಕ್ಕ ಸದಸ್ಯರೂ, ಕಾಲೇಜು ಕ್ಯಾಂಪಸ್ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡರು.

ಕನ್ಯಾನ ಸೆಕ್ಟರ್ ಇಶಾರ ಕನ್ವೀನರ್ ಖಾದರ್ ಸಅದಿ, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ರಝಾಖ್ ಬೈರಿಕಟ್ಟೆ

 ಎಸ್.ಎಂ.ಎ. ಈಸ್ಟ್ ವಿಭಾಗ ಜಿಲ್ಲಾ ಸದಸ್ಯ ಡಿ.ಕೆ.ಇಬ್ರಾಹೀಂ ಶಾ, ಎಸ್.ವೈ.ಎಸ್. ಕನ್ಯಾನ ಬ್ರಾಂಚ್ ಅಧ್ಯಕ್ಷ ಇಸ್ಮಾಯೀಲ್ ಪೊಯ್ಯಕಂಡ, ಎಸ್.ಎಂ.ಎ. ಕನ್ಯಾನ ರೀಜನಲ್ ಸಮಿತಿಯ ಅಧ್ಯಕ್ಷ ಮೂಸಬ್ಬ ಕಳಾಯಿ, ಕೋಶಾಧಿಕಾರಿ ಹುಸೈನಾರ್ ಹಾಜಿ ಪೊಯ್ಯಕಂಡ ಕಾರ್ಯದರ್ಶಿ ಸಿದ್ದೀಖ್ ಪೊಯ್ಯಕಂಡ, ಕೆ.ಸಿ.ಎಫ್. ಸದಸ್ಯರಾದ ಅಬ್ದುಲ್ ಮಾಲಿಕ್ ಅಮಾನಿ, ತೌಸೀಫ್ ಕನ್ಯಾನ, ಅಬ್ದುಲ್ ಖಾದರ್ ಮರ್ತನಾಡಿ  ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News