ನವರಾತ್ರಿಗೆ ರೈಲ್ವೆಯ ಕೊಡುಗೆ: ಉಪವಾಸ ಆಚರಿಸುವವರಿಗೆ ವಿಶೇಷ ‘ವ್ರತ ಭೋಜನ’

Update: 2019-10-02 14:37 GMT

ಹೊಸದಿಲ್ಲಿ,ಅ.2: ಭಾರತೀಯ ರೈಲ್ವೆಯು ನವರಾತ್ರಿ ಸಂದರ್ಭದಲ್ಲಿ ಉಪವಾಸವನ್ನು ಆಚರಿಸುತ್ತಿರುವ ತನ್ನ ಪ್ರಯಾಣಿಕರಿಗಾಗಿ ವಿಶೇಷ ಸಾತ್ವಿಕ ಭೋಜನವನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಿದೆ. ಜನರು ಇ-ಕೇಟರಿಂಗ್ ಸರ್ವಿಸಿಸ್ ಮೂಲಕ ‘ವ್ರತ ಭೋಜನ ’ಕ್ಕೆ ಬೇಡಿಕೆಯನ್ನು ಸಲ್ಲಿಸಬಹುದು. ವಿಶೇಷ ಭೋಜನ ವ್ಯವಸ್ಥೆಯು ಸೆ.29ರಿಂದ ಆರಂಭಗೊಂಡಿದ್ದು,ಅ.7ರವರೆಗೆ ಮುಂದುವರಿಯಲಿದೆ.

ರೈಲ್ವೆ ಜಾಲದಲ್ಲಿಯ ಆಯ್ದ ರೆಸ್ಟೋರಂಟ್‌ಗಳ ಮೂಲಕ ಮತ್ತು ಆಯ್ದ ನಿಲ್ದಾಣಗಳಲ್ಲಿ ನವರಾತ್ರಿ ಭೋಜನವು ಲಭ್ಯವಿದೆ ಎಂದು ಐಆರ್‌ಸಿಟಿಸಿ ಹೇಳಿಕೆಯಲ್ಲಿ ತಿಳಿಸಿದೆ. ಅದು ಒದಗಿಸಿರುವ ನಿಲ್ದಾಣಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ಯಾವುದೇ ನಿಲ್ದಾಣವನ್ನು ಉಲ್ಲೇಖಿಸಲಾಗಿಲ್ಲ.

ಪ್ರಯಾಣಿಕರು ರೈಲು ಹೊರಡುವ ನಿಗದಿತ ಸಮಯಕ್ಕೆ ಕನಿಷ್ಠ ಎರಡು ಗಂಟೆಗಳ ಮೊದಲು ಪಿಎನ್‌ಆರ್ ಜೊತೆ ಐಆರ್‌ಸಿಟಿಸಿಯ ಇ-ಕೇಟರಿಂಗ್ ವೆಬ್‌ಸೈಟ್‌ನಲ್ಲಿ ಅಥವಾ ‘ ಫುಡ್ ಆನ್ ಟ್ರಾಕ್ ’ಮೊಬೈಲ್ ಆ್ಯಪ್‌ನ ಮೂಲಕ ಈ ಸೇವೆಗೆ ಬೇಡಿಕೆಯನ್ನು ಸಲ್ಲಿಸಬಹುದಾಗಿದೆ. ಪ್ರಯಾಣಿಕರು ಪೂರ್ವ ಪಾವತಿ ಅಥವಾ ಊಟ ಪೂರೈಕೆಯಾದಾಗ ಹಣ ಪಾವತಿಸುವ ವಿಧಾನವನ್ನು ಆಯ್ದುಕೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News