ಭಾರತೀಯ ರೈಲ್ವೇ ಸ್ವಚ್ಛತಾ ಸಮೀಕ್ಷೆ: ಈ ಮೂರು ರೈಲ್ವೇ ನಿಲ್ದಾಣಗಳಿಗೆ ಅಗ್ರ ಸ್ಥಾನ

Update: 2019-10-02 17:40 GMT

ಜೈಪುರ,ಅ.2: ರಾಜಸ್ಥಾನದ ಜೈಪುರ, ಜೋಧ್‌ಪುರ ಮತ್ತು ದುರ್ಗಾಪುರ ರೈಲ್ವೇ ನಿಲ್ದಾಣಗಳು ಭಾರತೀಯ ರೈಲ್ವೇ ಸ್ವಚ್ಛತಾ ಸಮೀಕ್ಷೆಯಲ್ಲಿ ಅಗ್ರ ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಬುಧವಾರ ತಿಳಿಸಿದ್ದಾರೆ. ದೇಶದ 720 ರೈಲ್ವೇ ನಿಲ್ದಾಣಗಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. 109 ಉಪನಗರ ನಿಲ್ದಾಣಗಳ ಪೈಕಿ ಮುಂಬೈಯ ಅಂಧೇರಿ ನಿಲ್ದಾಣ, ವೀರರ್ ಮತ್ತು ನಯಗಾಂವ್ ನಿಲ್ದಾಣಗಳು ಅಗ್ರಸ್ಥಾನಿಗಳಾಗಿ ಹೊರಹೊಮ್ಮಿವೆ.

ವಾಯುವ್ಯ ರೈಲ್ವೇ ಅತ್ಯಂತ ಸ್ವಚ್ಛ ರೈಲ್ವೇ ವಲಯ ಎಂದು ಹೆಸರಿಸಲಾಗಿದೆ. ನಂತರದ ಸ್ಥಾನಗಳನ್ನು ಆಗ್ನೇಯ ಮತ್ತು ಪೂರ್ವ ರೈಲ್ವೇ ವಲಯಗಳು ತಮ್ಮದಾಗಿಸಿಕೊಂಡಿವೆ. ಭಾರತೀಯ ರೈಲ್ವೇ 2016ರಿಂದ ದೇಶದ ಪ್ರಮುಖ 407 ನಿಲ್ದಾಣಗಳ ಸ್ವಚ್ಛತಾ ದರ್ಜೆಯನ್ನು ಮೂರನೇ ಪಕ್ಷದಿಂದ ನಡೆಸುತ್ತಿದೆ. ಈ ವರ್ಷ ಪರಿಶೀಲನೆಯನ್ನು 720 ನಿಲ್ದಾಣಗಳಿಗೆ ವಿಸ್ತರಿಸಲಾಗಿತ್ತು. ನಿಲ್ದಾಣಗಳನ್ನು ಪರಿಸರಸ್ನೇಹಿಗೊಳಿಸಲು ನಡೆಸಲಾಗಿರುವ ಪ್ರಯತ್ನವನ್ನೂ ಈ ವೇಳೆ ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News