×
Ad

ಪಾಕ್ ತಂಡಕ್ಕೆ ಉಮರ್ ಅಕ್ಮಲ್ ವಾಪಸ್

Update: 2019-10-02 23:50 IST

ಲಾಹೋರ್, ಅ.2: ಶ್ರೀಲಂಕಾ ವಿರುದ್ಧ ಶನಿವಾರ ಆರಂಭವಾಗಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೆ ಪಾಕಿಸ್ತಾನ ಕ್ರಿಕೆಟ್ ತಂಡ ಅಹ್ಮದ್ ಶೆಹಝಾದ್, ಉಮರ್ ಅಕ್ಮಲ್ ಹಾಗೂ ಫಹೀಮ್ ಅಶ್ರಫ್‌ಗೆ ಕರೆ ನೀಡಿದೆ.

ಅಹ್ಮದ್ 2018ರ ಜುಲೈನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಕೊನೆಯ ಟಿ-20 ಪಂದ್ಯ ಆಡಿದ್ದರು. ಉಮರ್ 2016ರ ಸೆಪ್ಟಂಬರ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಕೊನೆಯ ಬಾರಿ ಟಿ-20 ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಫಹೀಮ್ ಈ ವರ್ಷದ ಮೇನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಿದ್ದರು.

ಈಗ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಭಾಗವಾಗಿರುವ ಆಬಿದ್ ಅಲಿ, ಮುಹಮ್ಮದ್ ರಿಝ್ವಿನ್ ಹಾಗೂ ಇಮಾಮ್‌ವುಲ್ ಹಕ್ ಬದಲಿಗೆ ಈ ಮೂವರು ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದಾಗ ಇಮಾಮ್ ಎಡಗೈಗೆ ಗಾಯವಾಗಿತ್ತು. ಹೀಗಾಗಿ ಅವರು ಟಿ-20 ಸರಣಿಯಿಂದ ಹೊರಗುಳಿದಿದ್ದಾರೆ.

3 ಟಿ-20 ಪಂದ್ಯಗಳು ಅಕ್ಟೋಬರ್ 5, 7 ಹಾಗೂ 9 ರಂದು ಲಾಹೋರ್‌ನ ಗಡ್ಡಾಫಿ ಸ್ಟೇಡಿಯಂನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News