ಬೆಂಗಳೂರು, ಮುಂಬಾ ಪ್ಲೇ-ಆಫ್‌ಗೆ ತೇರ್ಗಡೆ

Update: 2019-10-02 18:29 GMT

ಪಂಚಕುಲ,ಅ.2: ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ತಂಡ ಗಳು ಬುಧವಾರ ನಡೆದ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸುಲಭ ಜಯ ದಾಖಲಿಸಿ ಪ್ಲೇ-ಆಫ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.

ಪವನ್ ಕುಮಾರ್ ಮತ್ತೊಮ್ಮೆ ಬುಲ್ಸ್ಸ್ ತಂಡದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದು, ಆತಿಥೇಯ ಹರ್ಯಾಣ ಸ್ಟೀಲರ್ಸ್ ವಿರುದ್ಧ 59-36 ಅಂಕಗಳ ಅಂತರದಿಂದ ಜಯ ಸಾಧಿಸಲು ನೆರವಾದರು.

ಒಟ್ಟು 39 ಅಂಕ ಗಳಿಸಿದ ಪವನ್ ಇಡೀ ಹರ್ಯಾಣ ತಂಡ ಗಳಿಸಿದ್ದಕ್ಕಿಂತ ಮೂರು ಅಂಕ ಹೆಚ್ಚಿಗೆ ಗಳಿಸಿದರು. ಪಂದ್ಯವೊಂದರಲ್ಲಿ 34 ಅಂಕ ಗಳಿಸಿದ್ದ ಪ್ರರ್ದೀಪ್ ನರ್ವಾಲ್ ದಾಖಲೆಯನ್ನು ಮುರಿದರು. ಹರ್ಯಾಣದ ಪರ ಪ್ರಶಾಂತ್ ಕುಮಾರ್ ರೈ 17 ಅಂಕ ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು 30-26 ಅಂತರದಿಂದ ಮಣಿಸಿದ ಯು ಮುಂಬಾ ಪ್ಲೇ-ಆಫ್‌ನಲ್ಲಿ ಸ್ಥಾನ ಪಡೆದಿದೆ. ಮುಂಬಾ ಪರ ಅಭಿಷೇಕ್ ಸಿಂಗ್ ಏಳಂಕ ಗಳಿಸಿದರು.ಪಾಟ್ನಾ ಪರ ಪರ್ದೀಪ್ ನರ್ವಾಲ್ 8 ಅಂಕ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News