ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್: ಮಾದಕ ದ್ರವ್ಯ ವಿರುದ್ಧ ಜನ ಜಾಗೃತಿ ಅಭಿಯಾನ

Update: 2019-10-03 07:06 GMT

ಮಂಜನಾಡಿ, ಅ.3: ಗಾಂಧಿ ಜನ್ಮ ದಿನಾಚರಣೆಯ ಪ್ರಯುಕ್ತ ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ವತಿಯಿಂದ ಮಾದಕ ದ್ರವ್ಯ ವಿರುದ್ಧ ಜನ ಜಾಗೃತಿ ಅಭಿಯಾನವು ತೌಡುಗೋಳಿ ಕ್ರಾಸ್ ಜಂಕ್ಷನ್ ನಲ್ಲಿ ನಡೆಯಿತು.

ಎಸ್ಸೆಸ್ಸೆಫ್ ದ.ಕ ಝೋನ್ ಉಪಾಧ್ಯಕ್ಷ ಇಬ್ರಾಹಿಂ ಅಹ್ಸನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾದಕ ವಸ್ತುಗಳ ಹಾವಳಿಯನ್ನು ತಡೆಗಟ್ಟಬೇಕು. ಮಾದಕ ದ್ರವ್ಯವನ್ನು ಭಾರತದಿಂದ ತೊಲಗಿಸದೆ ಸ್ವಸ್ಥ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ, ಇದನ್ನು ಸರಕಾರ ಅರಿತುಕೊಳ್ಳಬೇಕು. ಮಾದಕ ದ್ರವ್ಯ ವಿರುದ್ಧ ಎಸ್ಸೆಸ್ಸೆಫ್ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಈ ಹೋರಾಟ ಮುಂದುವರಿಯಲಿದ್ದು, ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅಲ್ ಮದೀನಾ ಕನ್ನಡ ಮಾಧ್ಯಮ ಹೈ ಸ್ಕೂಲ್ ಮುಖ್ಯೋಪಾದ್ಯಾಯ ಮುಹಮ್ಮದ್ ಹನೀಫ್, ದ.ಕ ಝೋನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಲಿಕೆ, ಸೆಕ್ಟರ್ ವ್ಯಾಪ್ತಿಯ ವಿವಿಧ ಶಾಖೆಗಳ ಕ್ಯೂ ಟೀಮ್ ಕಾರ್ಯಕರ್ತರು, ಸಂಘಟನಾ ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News