×
Ad

ಮಂದಿರದ ಪುನರ್‌ನಿರ್ಮಾಣಕ್ಕಾಗಿ ಒಳ್ಳೆಯ ಜಾಗ ಹುಡುಕುವಂತೆ ಅರ್ಜಿದಾರರಿಗೆ ಸುಪ್ರೀಂ ಸೂಚನೆ

Update: 2019-10-04 20:50 IST

ಹೊಸದಿಲ್ಲಿ,ಅ.4: ಮಂದಿರಕ್ಕಾಗಿ ಒಳ್ಳೆಯ ಜಾಗಕ್ಕಾಗಿ ರಾಜಿ ಪರಿಹಾರವನ್ನು ಕಂಡುಕೊಳ್ಳುವಂತೆ ರವಿದಾಸ ಮಂದಿರ ಪುನರ್‌ನಿರ್ಮಾಣವನ್ನು ಕೋರಿರುವ ಅರ್ಜಿದಾರರನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಆಗ್ರಹಿಸಿದೆ. ಮಂದಿರದ ಆಧಿಕಾರಿಗಳು ಅತಿಕ್ರಮಣವನ್ನು ಮಾಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ)ವು ಆ.10ರಂದು ದಿಲ್ಲಿಯ ತುಘ್ಲಕಾಬಾದ್ ಪ್ರದೇಶದಲ್ಲಿಯ ರವಿದಾಸ ಮಂದಿರವನ್ನು ನೆಲಸಮಗೊಳಿಸಿತ್ತು.

ನ್ಯಾಯಾಲಯವು ಈ ಭೂಮಿಯ ಮೇಲಿನ ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸುತ್ತದೆ,ಆದರೆ ನಿಯಮಗಳನ್ನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಎಸ್.ರವೀಂದ್ರ ಭಟ್ ಅವರ ಪೀಠವು, ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರೊಂದಿಗೆ ಚರ್ಚಿಸುವಂತೆ ಮತ್ತು ರಾಜಿ ಪರಿಹಾರವೊಂದನ್ನು ಕಂಡುಕೊಂಡ ಬಳಿಕ ತನ್ನ ಬಳಿಗೆ ಮರಳುವಂತೆ ಅರ್ಜಿದಾರರಿಗೆ ನಿರ್ದೇಶ ನೀಡಿತು. ಯಾವಾಗ ಬೇಕಾದರೂ ನಾವು ಆದೇಶವನ್ನು ಹೊರಡಿಸುತ್ತೇವೆ ಎಂದು ಅದು ತಿಳಿಸಿತು.

ಪ್ರಕರಣದ ಮುಂದಿನ ವಿಚಾರಣೆಯು ಅ.18ರಂದು ನಡೆಯಲಿದೆ.

ರವಿದಾಸ ಮಂದಿರವನ್ನು ನೆಲಸಮಗೊಳಿಸಿದ್ದು ಹಲವಾರು ದಲಿತ ಗುಂಪುಗಳಿಂದ ಹಿಂಸಾತ್ಮಕ ಪ್ರತಿಭಟನೆಗಳಿಗೆ ನಾಂದಿ ಹಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News