ಉಗ್ರರಿಗೆ ಆರ್ಥಿಕ ನೆರವು ಪ್ರಕರಣ: ಯಾಸಿನ್ ಮಲಿಕ್, ಇತರರ ವಿರುದ್ಧ ಪೂರಕ ಎಫ್‌ಐಆರ್ ದಾಖಲು

Update: 2019-10-04 17:29 GMT

ಹೊಸದಿಲ್ಲಿ, ಅ.4: ಭಯೋತ್ಪಾದಕ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆ ನಡೆಸಿ ಭಾರತ ಸರಕಾರದ ವಿರುದ್ಧ ಸಮರ ಸಾರಲು ಷಡ್ಯಂತ್ರ ರೂಪಿಸಿದ ಆರೋಪದಡಿ ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಹಾಗೂ ಇತರ ನಾಲ್ವರು ಪ್ರತ್ಯೇಕತಾವಾದಿ ಮುಖಂಡರ ವಿರುದ್ಧ ಎನ್‌ಐಎ ಶುಕ್ರವಾರ ಪೂರಕ ಆರೋಪಪಟ್ಟಿ ದಾಖಲಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಾಕೇಶ್ ಸಯಾಲ್ ಅವರೆದುರು ಆರೋಪಪಟ್ಟಿ ಸಲ್ಲಿಸುವ ಪ್ರಕ್ರಿಯೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾಗಿದೆ. ಅಕ್ಟೋಬರ್ 23ರಂದು ನ್ಯಾಯಾಲಯ ಆರೋಪಪಟ್ಟಿಯನ್ನು ಗಮನಿಸಲಿದೆ.

 ಕಾಶ್ಮೀರದಲ್ಲಿ ಶಾಂತಿ ಕದಡಲು ಪ್ರತ್ಯೇಕತಾವಾದಿಗಳಿಗೆ ಪಾಕಿಸ್ತಾನದ ಹೈಕಮಿಷನ್ ಆರ್ಥಿಕ ನೆರವು ಒದಗಿಸಿದೆ ಎಂದು 3000 ಪುಟಗಳ ಈ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಮಲಿಕ್ ಅವರಲ್ಲದೆ ಪ್ರತ್ಯೇಕತಾವಾದಿ ಮುಖಂಡರಾದ ಶಬೀರ್ ಶಾ, ಮಸರತ್ ಆಲಂ ಭಟ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಶಾಸಕ ರಶೀದ್ ಇಂಜಿನಿಯರ್ ಹಾಗೂ ಆಸಿಯಾ ಅಂದ್ರಾಬಿ ಎಂಬ ಮಹಿಳೆಯ ಹೆಸರು ಎಫ್‌ಐಆರ್‌ನಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News