ಎಸ್ಸೆಸ್ಸೆಫ್ ಉಪ್ಪಿನಂಗಡಿ ಸೆಕ್ಟರ್ ವತಿಯಿಂದ ಮಾದಕ ದ್ರವ್ಯ ವಿರುದ್ಧ ಜನಜಾಗೃತಿ

Update: 2019-10-04 18:35 GMT

ಉಪ್ಪಿನಂಗಡಿ, ಅ.4: ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಉಪ್ಪಿನಂಗಡಿ ಸೆಕ್ಟರ್ ಇದರ ವತಿಯಿಂದ ಗಾಂಧೀ ಜಯಂತಿಯ ಪ್ರಯುಕ್ತ ಮಾದಕ ದ್ರವ್ಯ ವಿರುದ್ಧ ಜನಜಾಗೃತಿ ಅಭಿಮಾಯನವು ಕರುವೇಲು ಜಂಕ್ಷನ್ ನಲ್ಲಿ ನಡೆಯಿತು.

ಸೆಕ್ಟರ್ ಅಧ್ಯಕ್ಷ ಹಾರಿಸ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ.ಎಚ್ ಸಖಾಫಿ ನಚ್ಚಬೆಟ್ಟು ಪ್ರಾರ್ಥನೆಗೈದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಶನ್ ನಾಯಕ ಎಂ.ಎಂ ಮಹ್ ರೂಫ್ ಆತೂರು ಮುಖ್ಯಭಾಷಣವನ್ನು ಮಾಡಿ ಮದ್ಯದಿಂದ ಉಂಟಾಗುತ್ತಿರುವ ದುಷ್ಪರಿಣಾಮ ಹಾಗೂ ಮಾದಕ ದ್ರವ್ಯಗಳಿಗೆ ಮಾನವನು ಬಲಿಯಾಗುತ್ತಿರುವುದನ್ನು ವಿವರಿಸುತ್ತಾ ಗಾಂಧಿಯ ಮದ್ಯ ಮುಕ್ತ ಭಾರತದ ಕನಸು ನನಸಾಗಿಸಲು ನಾವೆಲ್ಲರೂ ಪಣತೊಡಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ಫ್ ಉಪ್ಪಿನಂಗಡಿ ಸೆಕ್ಟರ್ ನಾಯಕ ಹಮೀದ್ ಕರುವೇಲು, ಹಾರಿಸ್ ಗಂಡಿಬಾಗಿಲು ಅಲ್ಲದೆ ಎಸ್ಸೆಸ್ಸೆಫ್ ನ ಕ್ಯೂ ಟೀಂ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮದ್ಯದ ದುಷ್ಪರಿಣಾಮಗಳನ್ನು ವಿವರಿಸಲಾದ ಕರಪತ್ರವನ್ನು ಉಪ್ಪಿನಂಗಡಿ ಜಂಕ್ಷನ್ ವರೆಗೆ ವಿತರಿಸಲಾಯಿತು. ಸೆಕ್ಟರ್ ಕಾರ್ಯದರ್ಶಿ ಸಿರಾಜ್ ಆತೂರು ಸ್ವಾಗತಿಸಿ, ಪ್ರ.ಕಾರ್ಯದರ್ಶಿ ಉನೈಸ್ ಅಹ್ಮದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News