×
Ad

ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್

Update: 2019-10-05 23:45 IST

ಮಾಸ್ಕೋ, ಅ.5: ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಶನಿವಾರ ಭಾರತ ಮಿಶ್ರ ಫಲಿತಾಂಶ ದಾಖಲಿಸಿದ್ದು, ಸವೀಟಿ ಬೂರಾ(75ಕೆಜಿ) ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ, ನೀರಜ್ ಫೋಗಟ್(57ಕೆಜಿ)ಸೋತು ಟೂರ್ನಿಯಿಂದ ಹೊರ ನಡೆದರು.

ಮಂಗೋಲಿಯದ ಮೈಯಾಗ್‌ಮರ್ಜಗಲ್ ಮುಂಖ್‌ಬಟ್‌ರನ್ನು ಮೊದಲ ಸುತ್ತಿನ ಪಂದ್ಯದಲ್ಲಿ 5-0 ಅಂತರದಿಂದ ಮಣಿಸಿದ ಬೂರಾ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕದ ವೆಲ್ಶ್ ವುಮನ್ ಲಾರೆನ್ ಪ್ರೈಸ್ ಸವಾಲು ಎದುರಿಸಲಿದ್ದಾರೆ. ಚೀನಾದ ಖಿಯಾವೊ ಜಿರೂ ವಿರುದ್ಧ ಉತ್ತಮ ಹೋರಾಟ ನೀಡಿದ ನೀರಜ್ ಪೋಗಟ್ 2-3 ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News