×
Ad

ಅಮಿತ್ ಶಾ ವಿಮಾನ ಹಾರಾಟ ನಡೆಸಲು ಹಿರಿಯ ಅಧಿಕಾರಿಯ ಸೋಗು ಹಾಕಿದ ಬಿಎಸ್‌ಎಫ್ ಪೈಲೆಟ್ ರಾಜೀನಾಮೆ

Update: 2019-10-06 20:38 IST

 ಹೊಸದಿಲ್ಲಿ, ಅ. 6: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಮಾನ ಹಾರಾಟ ನಡೆಸಲು ಹಿರಿಯ ಅಧಿಕಾರಿಯಂತೆ ಸೋಗು ಹಾಕಿದ ಹಿನ್ನೆಲೆಯಲ್ಲಿ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪೈಲೆಟ್ ವಿಂಗ್ ಕಮಾಂಡರ್ (ನಿವೃತ್ತ) ಜೆ.ಎಸ್. ಸಂಗ್ವಾನ್ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

  ವಿಂಗ್ ಕಮಾಂಡರ್ (ನಿವೃತ್ತ) ಸಂಗ್ವಾನ್ ವಿರುದ್ಧ ನಡೆಯುತ್ತಿರುವ ಇಲಾಖಾ ತನಿಖೆ ಬಾಕಿ ಇರುವುದರಿಂದ ಸಂಗ್ವಾನ್ ಸೆಪ್ಟಂಬರ್ ಮೊದಲ ವಾರದಲ್ಲಿ ಸಲ್ಲಿಸಿದ ರಾಜೀನಾಮೆ ಸ್ವೀಕರಿಸಲು ಆಡಳಿತಕ್ಕೆ ಸಾಧ್ಯವಿಲ್ಲ ಎಂದು ಬಿಎಸ್‌ಎಫ್ ಮೂಲಗಳು ತಿಳಿಸಿವೆ. 

  ‘‘ಅವರ ವಿಚಾರಣೆ ಬಾಕಿ ಇರುವ ವರೆಗೆ, ರಾಜೀನಾಮೆ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ’’ ಎಂದು ಬಿಎಸ್‌ಎಫ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಎಸ್‌ಎಫ್‌ನ ವಾಯು ದಳದಲ್ಲಿ ನಿಯೋಜಿತರಾಗಿದ್ದ ಸಂಗ್ವಾನ್ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಸಂಗ್ವಾನ್ ಅಕ್ಟೋಬರ್ 31ರಿಂದ ಅನ್ವಯವಾಗುವಂತೆ ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News