70 ವರ್ಷಗಳಿಂದ ಭಾರತದ ಪರಂಪರೆ ಮುನ್ನಡೆಸಿದವರನ್ನು ಕಾಶ್ಮೀರದ ಜೈಲಿನಲ್ಲಿಡಲಾಗಿದೆ: ಅರುಂಧತಿ ರಾಯ್

Update: 2019-10-06 17:37 GMT

ಹೊಸದಿಲ್ಲಿ, ಅ.6: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಸರಕಾರ ಎರಡು ತಿಂಗಳು ನಿರ್ಬಂಧ ಹೇರಿದ್ದ ಅವಧಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ, ಧ್ವನಿ ಎತ್ತಬಲ್ಲ ಎಲ್ಲಾ ವ್ಯಕ್ತಿಗಳನ್ನೂ ಬಂಧನದಲ್ಲಿಡಲಾಗಿದೆ . ಕಾಶ್ಮೀರಿಗಳಿಗೆ ಸ್ವಯಂ ನಿರ್ಣಯದ ಅಧಿಕಾರ ಬೇಕು ಎಂದು ಕಾದಂಬರಿಗಾರ್ತಿ ಮತ್ತು ಸಾಮಾಜಿಕ ಹೋರಾಟಗಾರ್ತಿ ಅರುಂಧತಿ ರಾಯ್ ಹೇಳಿದ್ದಾರೆ.

ಸರಕಾರದ ಕ್ರಮದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ, ಧ್ವನಿ ಎತ್ತುವ ಸಾಹಸವನ್ನು ಯಾರಾದರೂ ತೋರಿದರೆ ಅವರನ್ನು ಬಂಧಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿಗಳ ಸಹಿತ ಕಳೆದ 70 ವರ್ಷಗಳಿಂದ ಭಾರತದ ಪರಂಪರೆಯನ್ನು ಮುನ್ನಡೆಸಿಕೊಂಡು ಬಂದಿರುವ ಎಲ್ಲರನ್ನೂ ಜೈಲಿನಲ್ಲಿಡಲಾಗಿದೆ. ಕಾಶ್ಮೀರಿಗಳಿಗೆ ಸ್ವಯಂ ನಿರ್ಣಯದ ಅಧಿಕಾರ ನೀಡಬೇಕು. ತಮ್ಮ ಭವಿಷ್ಯವನ್ನು ಅವರೇ ನಿರ್ಧರಿಸಬೇಕು. ತಮ್ಮ ಸ್ವಂತ ಭೂಮಿ ಹಾಗೂ ಸಂಸ್ಕೃತಿಯ ಉಸ್ತುವಾರಿ ಅವರೇ ನಿರ್ವಹಿಸುವಂತಾಗಬೇಕು ಎಂದು ಬೂಕರ್ ಪ್ರಶಸ್ತಿ ಪುರಸ್ಕೃತ ಕಾದಂಬರಿಗಾರ್ತಿ ರಾಯ್ ಹೇಳಿದ್ದಾರೆ.

ಅಮೆರಿಕ ಮೂಲದ ವೆಬ್‌ಸೈಟ್ ‘ದಿ ಇಂಟರ್‌ಸೆಪ್ಟ್’ಗೆ ನೀಡಿದ ಸಂದರ್ಶನದಲ್ಲಿ ಅವರು ಅಭಿಪ್ರಾಯ ಹಂಚಿಕೊಂಡರು.

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂತಾದ ನಾಯಕರನ್ನು ಉಲ್ಲೇಖಿಸಿದ ಅವರು, ಪಂಜರದಲ್ಲಿರುವ 7 ಮಿಲಿಯನ್ ಜನರ ಬಗ್ಗೆ ಈ ನಾಯಕರೇಕೆ ಚರ್ಚೆ ನಡೆಸಬೇಕು. ತಮ್ಮ ಭವಿಷ್ಯವನ್ನು ಕಾಶ್ಮೀರದ ಜನರೇ ನಿರ್ಧರಿಸಬೇಕು. ಇದು ಅಸಾಧ್ಯವಾದ ಮಾತೇನಲ್ಲ ಎಂದು ಅರುಂಧತಿ ರಾಯ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News