ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ವಿಖಾಯದ ವತಿಯಿಂದ ಸ್ವಚ್ಛತ್ವ ಅಭಿಯಾನ

Update: 2019-10-08 12:29 GMT

ಕೊಣಾಜೆ : ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ವಿಖಾಯ ಸಮಿತಿ ವತಿಯಿಂದ ದೇರಳಕಟ್ಟೆ ನಾಟೆಕಲ್ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.

ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯ ಅಧ್ಯಕ್ಷ ರಿಯಾಝ್ ರಹ್ಮಾನಿ ಉದ್ಘಾಟಿಸಿದರು.

ಇಸ್ಲಾಂ ಧರ್ಮದ ಭಾಗವಾಗಿ‌ದೆ ಸ್ವಚ್ಛತೆ. ಈ ನಿಟ್ಟಿನಲ್ಲಿ ವಿಖಾಯ ಪಡೆ ಪರಿಸರ ಸ್ವಚ್ಛಗೊಳಿಸಲು ತೊಡಗಿದೆ. ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಯುವ ಪಿಲಿಗೆಯನ್ನು ತನ್ನನು ತಾನು ತೊಡಗಿಸುದ ಮೂಲಕ ಯುವ ಜನಾಂಗವನ್ನು ಒಳಿತಿನಡೆಗೆ ಕೊಂಡುದಾಗಿದೆ ವಿಖಾಯದ ಉದ್ದೇಶ ಎಂದು ಹೇಳಿದರು‌.

ಶಾಸಕ ಯು.ಟಿ ಖಾದರ್, ಕೊಣಾಜೆ ಪೊಲೀಸ್ ಠಾಣಾಧಿಕಾರಿ ಯೋಗೇಶ್ವರ್. ಕೊಣಾಜೆ ಪೊಲೀಸರಾದ ಬಾಸ್ಕರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

 ದೇರಳಕಟ್ಟೆ ಕ್ಲಸ್ಟರ್ ಅಧ್ಯಕ್ಷ ಸಯ್ಯದ್ ಅಲೀ, ದೇರಳಕಟ್ಟೆ ರೇಂಜ್ ಜಮೀಯ್ಯತ್ತುಲ್ ಮುಅಲ್ಲಿಮೀನ್ ಮಾಜಿ ಪ್ರ.ಕಾರ್ಯದರ್ಶಿ ಫಾರೂಕ್ ದಾರಿಮಿ ಗ್ರಾಮಚಾವಡಿ ಮುಂತಾದವರು ಮುಖ್ಯ ಅತಿಥಿಯಾಗಿ ಭಾಗವಹಿದರು.

ಸ್ವಚ್ಛತಾ ಕಾರ್ಯದಲ್ಲಿ ಎಸ್.ಕೆ ಎಸ್ ಎಫ್ ದೇರಳಕಟ್ಟೆ ಶಾಖಾ ಉಪಾಧ್ಯಕ್ಷ ಹರ್ಷಾದ್. ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಮಾಜಿ ಅಧ್ಯಕ್ಷ ನೌಫಾಲ್.ಬಿ. ಪ್ರ.ಕಾರ್ಯದರ್ಶಿ ಮೊಹಮ್ಮದ್ ಮುನ್ಸಿದ್ .ಕೋಶಾಧಿಕಾರಿ ಫೈಝಲ್ ಡಿ.ಎಂ ಹಾಗೂ  ದೇರಳಕಟ್ಟೆ ಶಾಖೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News