‘ಬಾಯಿ ಆರೋಗ್ಯ ಆವಿಷ್ಕಾರ ಸಮ್ಮೇಳನ-2019’ ಮಿಂಚಿದ ಮಣಿಪಾಲ ಡೆಂಟಲ್ ಕಾಲೇಜು ವಿದ್ಯಾರ್ಥಿಗಳು

Update: 2019-10-08 15:36 GMT

ಉಡುಪಿ, ಅ.8: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವತಿಯಿಂದ ಹೊಸದಿಲ್ಲಿಯ ಎಐಐಎಂಎಸ್‌ನ ಸೆಂಟರ್ ಫಾರ್ ಡೆಂಟಲ್ ಎಜ್ಯುಕೇಷನ್ ಎಂಡ್ ರಿಸರ್ಚ್ ಆಯೋಜಿಸಿದ್ದ ‘ಬಾಯಿ ಆರೋಗ್ಯ ಆವಿಷ್ಕಾರ ಸಮ್ಮೇಳನ-2019’ರಲ್ಲಿ ಭಾಗವಹಿಸಿದ ಮಣಿಪಾಲದ ಮಣಿಪಾಲ ಡೆಂಟಲ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಪ್ರದರ್ಶಿಸಿದ್ದಾರೆ.

ಈ ಸಮ್ಮೇಳನದಲ್ಲಿ ಬಾಗವಹಿಸಿದ 165 ತಂಡಗಳಲ್ಲಿ ಅಗ್ರ 15 ತಂಡಗಳಲ್ಲಿ ಮಾಹೆಯ ಎಂಸಿಓಡಿಎಸ್ ಸಹ ಸೇರಿದ್ದು, ಪ್ರಶಸ್ತಿಯನ್ನು ಪಡೆದಿದೆ. ಜನರ ಬಾಯಿ ಆರೋಗ್ಯದ ಸುಧಾರಣೆಗಾಗಿ ಪರಿಣಾಮಕಾರಿಯಾದ ಹಾಗೂ ತೀರಾ ಕಡಿಮೆ ಖರ್ಚಿನ ಆವಿಷ್ಕಾರಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಭಾಗವಹಿಸಿದ ತಂಡಗಳಲ್ಲಿ ಶ್ರೇಷ್ಠ 15 ತಂಡಗಳನ್ನು ಸಿಡಿಇಆ್ ಆಯ್ಕೆ ಮಾಡಿತ್ತು.

ಸಮ್ಮೇಳನದ ಕೊನೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದ ವಿಜೇತರ ಹೆಸರನನು ಪ್ರಕಟಿಸಿತು. ಸಮ್ಮೇಳನದಲ್ಲಿ ಮಣಿಪಾಲ ಎಂಸಿಒಡಿಎಸ್‌ನ ಮೂರು ತಂಡಗಳು ಭಾಗವಹಿಸಿದ್ದು, ಮೂರು ತಂಡಗಳು ಅಗ್ರ 15ರಲ್ಲಿ ಸ್ಥಾನ ಪಡೆದಿವೆ.

ಎಂಸಿಒಡಿಎಸ್‌ನಲ್ಲಿ ಇಂಟರ್ನಿಯಾಗಿರುವ ಡಾ.ಅಭಯ ಪಾಲ್ ಹಾಗೂ ಡಾ.ಅನ್ಮೊಲ ದೀಕ್ಷಿತ್ ಅವರು ಡಾ.ಕೋಮಲ್ ಸ್ಮತಿ ಅವರ ಮಾರ್ಗದರ್ಶನ ದಲ್ಲಿ ತಮ್ಮ ಆವಿಷಾ್ಕರವನ್ನು ಪ್ರಸ್ತುತ ಪಡಿಸಿದ್ದರು.

ಉಳಿದಂತೆ ಅಂತಿಮ ವರ್ಷದ ಆಯುಷಿ ಬಗ್ಗಾ, ಅನಸೂಯ ಚೌಧುರಿ ಹಾಗೂ ನಮ್ರತಾ ದತ್ತಾ ಅವರು ಡಾ.ರಾಮಪ್ರಸಾದ್ ವಿ.ಪಿ.ಅವರ ಮಾರ್ಗದರ್ಶನದಲ್ಲಿ ಹಾಗೂ ಡಾ.ರಿದ್ಯುಮ್ನ ಗರಿನ್ ಅವರು ಡಾ.ಸುಬ್ರಾಯ ಭಟ್ ಅವರ ಮಾರ್ಗದರ್ಶನದಲ್ಲಿ ತಮ್ಮ ಹೊಸ ಸಂಶೋಧನೆಯನ್ನು ಪ್ರಸ್ತುತ ಪಡಿಸಿದ್ದರು ಎಂದು ಮಾಹೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News