ಅ.11ರಿಂದ ಹಳೆಯ ನಾಣ್ಯಗಳ ಪ್ರದರ್ಶನ

Update: 2019-10-10 10:27 GMT

ಮಂಗಳೂರು, ಅ.10: ಫಿಲಾಟೆಲಿಕ್ ಡೀಲರ್ಸ್‌ ಅಸೋಸಿಯೇಶನ್ ಇಂಡಿಯಾ ವತಿಯಿಂದ ಅ.11ರಿಂದ 13ರವರೆಗೆ ನಗರದ ಎಂ.ಜಿ.ರಸ್ತೆಯಲ್ಲಿರುವ ದೀಪಾ ಕಂಫಟ್ಸ್‌ನಲ್ಲಿ ಹಳೆಯ ನಾಣ್ಯಗಳು, ಬ್ಯಾಂಕ್ ನೋಟುಗಳು ಮತ್ತು ಅಂಚೆ ಚೀಟಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದು ಅಸೋಸಿಯೇಶನ್‌ನ ಉಪಾಧ್ಯಕ್ಷ ಎ.ವಿ.ಜಯಚಂದ್ರನ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಳೆಯ ನಾಣ್ಯಗಳು, ನೋಟುಗಳು ಮತ್ತು ಅಂಚೆ ಚೀಟಿಗಳ ಸಂಗ್ರಹದ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ. ಈ ಮೇಳದಲ್ಲಿ ಜನತೆಗೆ ಹಳೆಯ ನಾಣ್ಯ, ಅಂಚೆ ಚೀಟಿಗಳನ್ನು ಖರೀದಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು.

ತಮಿಳುನಾಡು, ದೆಹಲಿ, ಪಂಜಾಬ್, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ಪಾಂಡಿಚೇರಿ ಸಹಿತ ದೇಶದ ವಿವಿಧ ಭಾಗಗಳಿಂದ ಅಂಚೆಟೀಟಿ ಸಂಗ್ರಹಗಾರರು ಆಗಮಿಸಲಿದ್ದಾರೆ. ಪ್ರತಿ ದಿನ 10:30ರಿಂದ ರಾತ್ರಿ 7:30ರವರೆಗೆ ಜನತೆ ಈ ಮೇಳದಲ್ಲಿ ಪಾಲ್ಗೊಳ್ಳಬಹುದು ಎಂದು ಎ.ವಿ.ಜಯಚಂದ್ರನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೇಳದ ಪ್ರಮುಖರಾದ ನಾಗರಾಜ್ ಶೇಟ್, ಪ್ರವೀಣ್ ಬಾಬು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News