ಬಜ್ಪೆ: 68 ವಿದ್ಯಾಥಿಗಳಿಗೆ ಸೈಕಲ್ ವಿತರಣೆ

Update: 2019-10-10 10:34 GMT

ಬಜ್ಪೆ, ಅ.10: ಇಲ್ಲಿನ ಹೋಲಿ ಫ್ಯಾಮಿಲಿ ಪ್ರೌಢಶಾಲೆಯಲ್ಲಿ 68 ವಿದ್ಯಾರ್ಥಿಗಳಿಗೆ ಗುರುವಾರ ಸರಕಾರದ ವತಿಯಿಂದ ಉಚಿತವಾಗಿ ನೀಡಲಾಗುವ ಸೈಕಲ್‌ನ್ನು ಗುರುವಾರ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಬಜ್ಪೆಗ್ರಾಪಂ ಅಧ್ಯಕ್ಷೆ ರೋಜಿ ಮಥಾಯಿಸ್ ಮಾತನಾಡಿ ಗ್ರಾಮೀಣ ಭಾಗದ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರಕಾರ ಎಂಟು ವರ್ಷಗಳಿಂದ ಕನ್ನಡ ಮಾಧ್ಯಮ ಪ್ರೌಢಶಾಲಾ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ನೀಡುತ್ತಿದೆ. ಸರಕಾರ ನೀಡುವ ಸೈಕಲ್, ಪುಸ್ತಕ, ಶೂ ಹಾಗೂ ಸ್ಕಾಲರ್‌ಶಿಪ್ ಮೂಲಕ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮುಂದೆ ಬಂದು ಶಾಲೆ, ಪಾಲಕರು ಹಾಗೂ ಸಮಾಜಕ್ಕೆ ಉತ್ತಮ ಹೆಸರು ತಂದು ಕೊಡಬೇಕು ಎಂದರು.

ತಾಪಂ ಸದಸ್ಯೆ ಉಷಾ ಮಾತನಾಡಿದರು. ಮುಖ್ಯ ಶಿಕ್ಷಕಿ ಸಿಸ್ಟರ್ ಸಿಂಥಿಯಾ ಡಿಕುನ್ಹ ಸ್ವಾಗತಿಸಿದರು. ದೈಹಿಕ ಶಿಕ್ಷಕ ಪ್ರಶಾಂತ್ ವಂದಿಸಿದರು. ಶಿಕ್ಷಕ ವಾಸುದೇವ ರಾವ್ ಕುಡುಪು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News