ಕೊಂಕಣಿ ಕಥಾ ಸಂಕಲನ ಬಿಡುಗಡೆ

Update: 2019-10-10 10:35 GMT

ಮಂಗಳೂರು, ಅ.10: ಲೇಖಕ ಜೆ.ಎಫ್.ಡಿಸೋಜ ಅತ್ತಾವರ ರಚಿಸಿದ ಮಕ್ಕಳ ಕಥೆಗಳ ಕೊಂಕಣಿ ಪುಸ್ತಕ ‘ರಾಬಿನ್ ಹುಡ್’ನ್ನು ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕೊಂಕಣಿ ಕವಿ ಮೆಲ್ವಿನ್ ರೊಡ್ರಿಗಸ್ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು ಇದೊಂದು ಅತ್ಯುತ್ತಮ ಪುಸ್ತಕವಾಗಿದ್ದು, ಮಕ್ಕಳ ಇಷ್ಟದ ಪುಸ್ತಕವಾಗಲಿದೆ. ಈಗಾಗಲೇ ಹಲವಾರು ಪುಸ್ತಕಗಳನ್ನು ಬರೆದಿರುವ ಜೆ.ಎಫ್.ಡಿಸೋಜ ಇದೀಗ ಮಕ್ಕಳಿಗಾಗಿ ಇನ್ನೊಂದು ಉತ್ತಮ ಪುಸ್ತಕ ಹೊರ ತಂದಿರುವುದು ಒಳ್ಳೆಯ ವಿಚಾರ. ಇಂತಹ ಇನ್ನಷ್ಟು ಪುಸ್ತಕಗಳು ಹೊರಬರುವಂತಾಗಲಿ ಎಂದು ಆಶಿಸಿದರು.

ಜೆ.ಎಫ್.ಡಿಸೋಜ ಅತ್ತಾವರ ಅವರ 13ನೇ ಪುಸ್ತಕ ಇದಾಗಿದ್ದು, ಈಗಾಗಲೇ ಕೊಂಕಣಿಯಲ್ಲಿ ಭಾಂಗಾರಾಚಿ ಮಾಸ್ಳಿ,ಭಾಂಗಾರಾಚಿ ಕುರಾಡ್, ಭಾಂಗಾರಾಚಿ ಇಮಾಜ್, ಭಾಂಗಾರಾಚಿ ಚಿತಳ್, ಭಾಂಗಾರಾಚಿ ಮಾಜರ್ ಹೀಗೆ ಮಕ್ಕಳಿಗಾಗಿ ಹಲವು ಉತ್ತಮ ಪುಸ್ತಕಗಳನ್ನು ಹೊರತಂದಿದ್ದಾರೆ. ವೃತ್ತಿ ನಿವೃತ್ತಿಯ ಬಳಿಕವೂ ಸಾಹಿತ್ಯದ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿರುವುದು ಅವರ ಸಾಹಿತ್ಯ ಪ್ರೀತಿಯನ್ನು ತೋರಿಸುತ್ತದೆ ಎಂದು ಮೆಲ್ವಿನ್‌ರೊಡ್ರಿಗಸ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೃತಿಕಾರ ಜೆ.ಎಫ್.ಡಿಸೋಜ ಅತ್ತಾವರ, ಪ್ರಮುಖರಾದ ಟ್ರೆಸ್ಲಿ ಪಿಂಟೋ, ಮಾರ್ಸೆಲ್ ಡಿಸೋಜ, ಅಪೊಲಿನಾವಿಸ್ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News