ಮನೆಗೆ ನುಗ್ಗಿ ಸೊತ್ತು ಕಳವು

Update: 2019-10-10 16:00 GMT

ಕಾರ್ಕಳ, ಅ.10: ಕೌಡೂರು ಗ್ರಾಮದ ಕಣಜಾರು ಎಂಬಲ್ಲಿ ಅ. 9ರಂದು ರಾತ್ರಿ ವೇಳೆ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಕಣಜಾರು ನಿವಾಸಿ ಪಾವೋ ಲೋಬೋ ಎಂಬವರ ಮನೆಯ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ ನಗದು 30,000 ಹಾಗೂ 10,000 ರೂ. ಮೌಲ್ಯದ 3 ವಾಚ್‌ಗಳನ್ನು ಕಳವು ಮಾಡಿರುವುದಾಗಿ ದೂರ ಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News