ಎಲ್‌ಜಿ: ‘ಖ್ವಾಹಿಶೋಂಸೆ ಖುಷಿಯೋನ್ ತಕ್’

Update: 2019-10-10 17:08 GMT

ಮಂಗಳೂರು, ಅ.10: ವಿಶ್ವ ವಿಖ್ಯಾತ ಇಲೆಕ್ಟ್ರಾನಿಕ್ ಮತ್ತು ಗೃಹೋಪಯೊಗಿ ಉತ್ಪನ್ನಗಳ ವಿಶ್ವದ ನಂ. 1 ಬ್ರಾಂಡ್ ಎಲ್‌ಜಿ ಕಂಪೆನಿಯ ಅಧಿಕೃತ ಶೋರೂಂ ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ‘ಎಲ್‌ಜಿ ಬೆಸ್ಟ್ ಶಾಪ್’ನಲ್ಲಿ ದೀಪಾವಳಿ ಪ್ರಯುಕ್ತ ’ಖ್ವಾಹಿಶೋಂಸೆ ಖುಷಿಯೋನ್ ತಕ್’ ಯೋಜನೆಯಡಿ ತನ್ನ ಗ್ರಾಹಕರಿಗೆ ಹಬ್ಬಗಳ ಸಡಗರಕ್ಕೆ ಕೊಡುಗೆಗಳ ಸರಮಾಲೆಯನ್ನೇ ನೀಡುತ್ತಿದೆ.

ನಾಲ್ಕು ಕೋಟಿ ರೂ. ಬಹುಮಾನ: ಎಲ್ಲ ಗೃಹೋಪಯೋಗಿ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಕಂಪೆನಿಯ ನಿರ್ದಿಷ್ಟ ಸಂಖ್ಯೆಗೆ ಸಂದೇಶ ರವಾನಿಸುವ ಮೂಲಕ ಈ ಯೋಜನೆಯಡಿಯಲ್ಲಿ ಪ್ರತೀ ವಾರ ನಡೆಯುವ ಡ್ರಾ ಮೂಲಕ ಬಹುಮಾನ ಗೆಲ್ಲಬಹುದು. ಅಕ್ಟೋಬರ್ 31ರಂದು ನಡೆಯುವ ಬಂಪರ್ ಬಹುಮಾನದ ಡ್ರಾದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕೂಡ ಪಡೆಯಲಿದ್ದಾರೆ. ಈ ಯೋಜನೆಯಡಿಯಲ್ಲಿ ಒಟ್ಟು ನಾಲ್ಕು ಕೋಟಿ ರೂ. ಮೊತ್ತದ ಬಹುಮಾನಗಳನ್ನು ವಿಜೇತರಿಗೆ ಕಂಪೆನಿ ನೀಡಲಿದೆ.

* ಉಚಿತ ಉಡುಗೊರೆ : ಎಲ್‌ಜಿ ಕಂಪೆನಿಯು ಆಯ್ದ ಉತ್ಪನ್ನಗಳೊಂದಿಗೆ 49,990 ರೂ. ಮೌಲ್ಯದ ಸೌಂಡ್ ಬಾರ್, 8,990 ರೂ. ವೌಲ್ಯದ ಸಣ್ಣ ರೆಫ್ರಿಜರೇಟರ್, 13,900 ರೂ. ಮೌಲ್ಯದ ಮೈಕ್ರೋ ಓವೆನ್, 11,990 ರೂ. ಮೌಲ್ಯದ ವಾಕ್ಯೂಮ್ ಕ್ಲೀನರ್, ಜಿಯೋ ಇಂಟರ್‌ನೆಟ್ ಡಾಂಗಲ್, ಏರ್‌ಟೆಲ್ ಡಿಟಿಎಚ್, ಮೈಕ್ರೋಫೋನ್, ಬೊರೋಸಿಲ್ ಗ್ಲಾಸ್ ಕಂಟೈನರ್, ಟ್ರಿಯೊ ಬೌಲ್ ಸೆಟ್ ಮುಂತಾದ ಹಲವು ಉಚಿತ ಉಡುಗೊರೆಗಳು ಲಭ್ಯ ಇವೆ.

ಎಕ್ಸ್‌ಟ್ರಾ ವಾರಂಟಿ: 32 ಇಂಚ್ ಮೇಲ್ಪಟ್ಟ ಎಲ್‌ಇಡಿಗಳಿಗೆ ಇದ್ದ ಒಂದು ವರ್ಷದ ವಾರಂಟಿಗೆ ಹಬ್ಬದ ಕೊಡುಗೆಯಾಗಿ ಮೂರು ವರ್ಷಗಳ ವರೆಗೆ ಸಂಪೂರ್ಣ ವಾರಂಟಿ ಹಾಗೂ ಆಯ್ದು ವಾಷಿಂಗ್ ಮೆಷಿನ್‌ಗಳಿಗೆ ಕೂಡ ಮೂರು ವರ್ಷಗಳ ಸಂಪೂರ್ಣ ವಾರಂಟಿ ಮತ್ತು 10 ವರ್ಷಗಳ ವಾರಂಟಿ ನೀಡಲಾಗುವುದು.

ಶೇ. 40 ಕ್ಯಾಶ್‌ಬ್ಯಾಕ್ ಕೊಡುಗೆಗಳು: ಎಲ್‌ಜಿ ಬೆಸ್ಟ್ ಶಾಪ್‌ನಲ್ಲಿ ಖರೀದಿಸುವ ಗ್ರಾಹಕರಿಗೆ ಆಯ್ದ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವ ಗ್ರಾಹಕರಿಗೆ ಶೇ.15ರಷ್ಟು ಗರಿಷ್ಠ 9,000 ರೂ.ವರೆಗೆ ಕ್ಯಾಶ್‌ಬ್ಯಾಕ್ ಲಭ್ಯ. ಪೇಟಿಎಂ ಮೂಲಕ ಖರೀದಿಸುವ ಗ್ರಾಹಕರಿಗೆ ಶೇ.20ರಷ್ಟು ಕ್ಯಾಶ್‌ಬ್ಯಾಕ್ ಲಭ್ಯವಿದೆ.

ಬಜಾಜ್ ಶೇ.0 ಫೈನಾನ್ಸ್ ಯೋಜನೆ/ಕ್ಯಾಶ್‌ಬ್ಯಾಕ್: ಎಲ್‌ಜಿ ಬ್ರಾಂಡ್ ಶಾಪ್‌ನಲ್ಲಿ ಖರೀದಿಸುವ ಎಲ್ಲ ಗ್ರಾಹಕರಿಗೆ ಬಡ್ಡಿರಹಿತವಾಗಿ ಯಾವುದೇ ಮುಂಗಡ ಪಾವತಿ ಮಾಡದೆ ಸುಲಭ ಮಾಸಿಕ ಕಂತಿನಲ್ಲಿ ಬಜಾಜ್ ಫೈನಾನ್ಸ್ ಮೂಲಕ ಖರೀದಿಸುವ ಗ್ರಾಹಕರಿಗೆ 10,000 ರೂ.ವರೆಗೆ ಕ್ಯಾಶ್‌ಬ್ಯಾಕ್ ಲಭ್ಯ.

ಎಸಿಗಳ ಮೇಲೆ ವಿಶೇಷ ಕೊಡುಗೆ: ಹೊಸ ಮಾದರಿಗಳ ಡ್ಯುಯಲ್ ಇನ್ವರ್ಟರ್ ಶೇ.100ರಷ್ಟು ತಾಮ್ರ ಖಚಿತ ಎಸಿಗಳು ವಿಶೇಷ ದರಗಳಲ್ಲಿ ಲಭ್ಯ. ಅಲ್ಲದೆ, ಈ ಎಸಿಗಳಿಗೆ 10 ವರ್ಷದ ಕಂಪ್ರೆಸ್ಸರ್ ವಾರಂಟಿಯೊಂದಿಗೆ ಐದು ವರ್ಷಗಳ ಉಚಿತ ಇನ್ಸೂರೆನ್ಸ್ ಲಭ್ಯ.

ಹೊಸ ಸೀಲಿಂಗ್ ಫ್ಯಾನ್: ಎಲ್‌ಜಿ ಕಂಪೆನಿಯು ಹೊಸ ‘ಮಾಸ್ಕಿಟೊ ಅವೇ’ ಸೀಲಿಂಗ್ ಫ್ಯಾನ್ ಮಾರುಕಟ್ಟೆಗೆ ಇತ್ತೀಚೆಗೆ ಬಿಡುಗಡೆ ಗೊಳಿಸಲಾಗಿದೆ. ಸುಲಭ ಮಾಸಿಕ ಕಂತಿನಲ್ಲಿ ಲಭ್ಯವಿದೆ.

ವಿಶೇಷ ವಿನಿಮಯ ಕೊಡುಗೆ: ಎಲ್‌ಜಿ ಕಂಪೆನಿಯು ತನ್ನ ಗ್ರಾಹಕರಿಗೆ ‘ಎಕ್ಸ್‌ಚೇಂಜ್ ಆ್ಯಂಡ್ ಅಪ್‌ಗ್ರೇಡ್’ ಯೋಜನೆಯ ಮೂಲಕ 6,000 ರೂ. ಮೌಲ್ಯಕ್ಕೆ ತಮ್ಮ ಯಾವುದೇ ಹಳೆಯ ಉತ್ಪನ್ನಗಳನ್ನು ಹೊಸ ಎಲ್‌ಜಿಯೊಂದಿಗೆ ಬದಲಾಯಿಸಬಹುದು. (ಗ್ರಾಹಕರಿಗೆ 6,000 ರೂ. ಮೌಲ್ಯದ ಪೇಟಿಎಂ ವೋಚರ್‌ನ್ನು ಮಾಲ್ ಮುಖಾಂತರ ಖರೀದಿಗೆ, ಇಲೆಕ್ಟ್ರಿಕ್ ಬಿಲ್ ಪಾವತಿಸಲು, ರೊಮೆಟೊ ಮೂಲಕ ಆಹಾರ ಖರೀದಿ ಹಾಗೂ ಮೂವೀ ಟಿಕೆಟ್‌ಗೆ ಬಳಸಬಹುದಾಗಿದೆ.)

win For Sure: ಎಲ್‌ಜಿ ಬ್ರಾಂಡ್ ಉತ್ಪನ್ನಗಳನ್ನು ಅಧಿಕೃತ ಶೋರೂಂನಿಂದ ಖರೀದಿಸುವ ಗ್ರಾಹಕರಿಗೆ win For Sure ಕೊಡುಗೆಯ ಪ್ರಕಾರ ಎಲ್ಲ ಯೋಜನೆಗಳ ಸೌಲಭ್ಯ ದೊರೆತ ಬಳಿಕ ಕೊನೆಯದಾಗಿ 500ರಿಂದ 1000 ರೂ.ವರೆಗೆ ಬಿಲ್ ಪಾವತಿಯಲ್ಲಿ ಕಡಿತಗೊಳಿಸಿ ಪಾವತಿಸುವ ವಿಶೇಷ ಯೋಜನೆ ಇದಾಗಿದೆ.

ಉಚಿತ ಇನ್ಶೂರೆನ್ಸ್: ಎಲ್‌ಜಿ ಬ್ರಾಂಡ್ ಶೋರೂಂನಿಂದ ಖರೀದಿಸುವ ಎಲ್ಲ ಎಲ್‌ಜಿ ಉತ್ಪನ್ನಗಳ ಮೇಲೆ ಒಂದು ವರ್ಷದ ಉಚಿತ ಇನ್ಶೂರೆನ್ಸ್ ಲಭ್ಯವಿದೆ. ಉತ್ಪನ್ನಗಳು ಯಾವುದೇ ರೀತಿಯಲ್ಲಿ ಹಾನಿಗೀಡಾದಲ್ಲಿ ಶೇ.90ರಷ್ಟು ವೆಚ್ಚವನ್ನು ಕಂಪೆನಿ ಭರಿಸುವ ಮೂಲಕ ಗ್ರಾಹಕರಿಗೆ ಯಾವುದೇ ಹೊರೆ ಬೀಳದಂತೆ ಜಾಗೃತೆ ವಹಿಸಲಾಗುವುದು.

ಉಚಿತ ಸಾಗಾಣಿಕೆ:- ಎಲ್'ಜಿ ಬ್ರಾಂಡ್'ಶಾಪ್ ತನ್ನ ಗ್ರಾಹಕರಿಗೆ ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಉಚಿತ ಸಾಗಾಣಿಕಾ ವ್ಯವಸ್ಥೆ ನೀಡುತ್ತಿದೆ.
ಈ ಕೊಡುಗೆಗಳು ಕೆ.ಎಸ್.ರಾವ್ ರಸ್ತೆಯ ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ಪಕ್ಕದಲ್ಲಿರುವ ಸಿಟಿಸೆಂಟರ್ ಸಮೀಪದ ಎಲ್'ಜಿ ಬೆಸ್ಟ್'ಶಾಪ್'ನಲ್ಲಿ ಮಾತ್ರ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವ್ಯವಸ್ಥಾಪಕ ಶಬೀರ್ ಅಹ್ಮದ್ ಮೊಬೈಲ್ ಸಂಖ್ಯೆ: 8722288383 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News