"ಮೋದಿ ಜಿ ನಿಮ್ಮ 56 ಇಂಚು ಎದೆ ತೋರಿಸಿ, ಚೀನಾ ಆಕ್ರಮಿತ ಪ್ರದೇಶ ತೆರವುಗೊಳಿಸುವಂತೆ ಹೇಳಿ''

Update: 2019-10-11 13:24 GMT

ಹೊಸದಿಲ್ಲಿ, ಅ.11: "ಕ್ಸಿ ಜಿನ್ ಪಿಂಗ್ ಅವರು 370ನೇ ವಿಧಿ ವಿಚಾರದಲ್ಲಿ ಇಮ್ರಾನ್ ಖಾನ್  ಬೆಂಬಲಿಸುತ್ತಿರುವುದರಿಂದ ಮೋದಿ ಜಿ ಮಾಮಲ್ಲಪುರಂನಲ್ಲಿ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಿ... 1) ಚೀನಾವು ಕರಕೋರಂ ಮುಖಾಂತರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸ್ವಾಧೀನಪಡಿಸಿರುವ 5,000 ಕಿ.ಮೀ. ಭೂಮಿ ತೆರವುಗೊಳಿಸಲು ಹೇಳಿ, 2) 5ಜಿಗೆ ಭಾರತದಲ್ಲಿ ಹುವಾಯಿ ಕಂಪೆನಿಗೆ ಅವಕಾಶ ಬೇಡ ಎಂದು ಹೇಳಿ. ನಿಮ್ಮ 56 ಇಂಚು ಎದೆಯನ್ನು ತೋರಿಸಿ'' ಎಂದು ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವೆ ಮಾಮಲ್ಲಪುರಂನಲ್ಲಿ ಅನೌಪಚಾರಿಕ ಸಭೆ ನಡೆಯುವ ಕೆಲವೇ ಗಂಟೆಗಳ ಮುನ್ನ ಸಿಬಲ್ ಅವರ ಈ ಹೇಳಿಕೆ ಬಂದಿದೆ.

``ಅಥವಾ ಹಾಥಿ ಕೆ ದಾಂತ್ ಖಾನೆ ಕೆ ಔರ್ ದಿಖಾನೆ ಕೆ ಔರ್ (ಹೇಳುವುದು ಒಂದು ಮಾಡುವುದು ಇನ್ನೊಂದು) ಇದಾಗಿದೆಯೇ?'' ಎಂದು ಸಿಬಲ್ ಪ್ರಶ್ನಿಸಿದ್ದಾರೆ.

ಕಾಶ್ಮೀರದಲ್ಲಿನ ಬೆಳವಣಿಗೆಗಳನ್ನು ತಾನು ಗಮನಿಸುತ್ತಿರುವುದಾಗಿ ಕ್ಸಿ ಈಗಾಗಲೇ ಹೇಳಿರುವಾಗ ಮೋದಿ ಸರಕಾರವೇಕೆ ತಾನು ಹಾಂಗ್ ಕಾಂಗ್ ನಲ್ಲಿ ಪ್ರಜಾಪ್ರಭುತ್ವ ಪರ ಹೋರಾಟವನ್ನು ಹತ್ತಿಕ್ಕುತ್ತಿರುವುನ್ನು ಗಮನಿಸುತ್ತಿರುವುದಾಗಿ ಹೇಳುತ್ತಿಲ್ಲ ಎಂದು ಕಾಂಗ್ರೆಸ್ ಗುರುವಾರ ಪ್ರಶ್ನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News