ಫೋರ್ಬ್ಸ್ ಶ್ರೀಮಂತ ಭಾರತೀಯ ಪಟ್ಟಿ: ಮುಕೇಶ್ ಅಂಬಾನಿ ಪ್ರಥಮ, ಅದಾನಿ ದ್ವಿತೀಯ

Update: 2019-10-11 15:28 GMT

ಹೊಸದಿಲ್ಲಿ,ಅ.11: ಫೋರ್ಬ್ಸ್‌ನ 2019ರ ಸಾಲಿನ ಅತ್ಯಂತ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಸತತ 12ನೇ ವರ್ಷವೂ ರಿಲಯನ್ಸ್ ಇಂಡಸ್ಟ್ರೀಸ್ ಲಿ.(ಆರ್‌ಐಎಲ್) ಮುಖ್ಯಸ್ಥ ಮುಕೇಶ್ ಅಂಬಾನಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ ಕೈಗಾರಿಕೋದ್ಯಮಿ ಗೌತಮ್ ಅದಾನಿ ಕಳೆದ ವರ್ಷದಿಂದ ಎಂಟು ಸ್ಥಾನಗಳ ಜಿಗಿತ ದಾಖಲಿಸಿ ಎರಡನೇ ಸ್ಥಾನಕ್ಕೇರಿದ್ದಾರೆ.

ಭಾರತೀಯ ಆರ್ಥಿಕತೆ ಸಂಕಷ್ಟದಲ್ಲಿ ಸಾಗುತ್ತಿದ್ದರೂ ತನ್ನ ಆಸ್ತಿ ಗಳಿಕೆಯಲ್ಲಿ ಯಾವುದೇ ಕುಸಿತ ಅನುಭವಿಸದ ಮುಕೇಶ್ ಅಂಬಾನಿ 51.4 ಬಿಲಿಯನ್ ಡಾಲರ್ ಆಸ್ತಿಯ ಒಡೆಯನಾಗಿದ್ದಾರೆ. ಮತ್ತೊಂದೆಡೆ, ಅದಾನಿ ಆದಾಯ 15.7 ಬಿಲಿಯನ್ ಡಾಲರ್ ಎಂದು ವರದಿಗಳು ತಿಳಿಸಿವೆ.

ಗುಜರಾತ್‌ನ ಮುಂದ್ರ ಬಂದರಿನ ನಿಯಂತ್ರಣ ಹೊಂದಿರುವ ಅದಾನಿ ವಿದ್ಯುತ್, ಅಡುಗೆ ಎಣ್ಣೆ, ರಿಯಲ್ ಎಸ್ಟೇಟ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಕಾರ್ಯಾಚರಿಸುತ್ತದೆ ಎಂದು ಫೋರ್ಬ್ಸ್ ತಿಳಿಸಿದೆ. ಪಟ್ಟಿಯಲ್ಲಿರುವ ಇತರ ಶ್ರೀಮಂತ ಭಾರತೀಯರೆಂದರೆ, ಕ್ರಮವಾಗಿ, ಹಿಂದುಜಾ ಸಹೋದರರು, ಪಲ್ಲೊಂಜಿ ಮಿಸ್ತ್ರಿ, ಉದಯ್ ಕೋಟಕ್, ಶಿವ್ ನಡಾರ್, ರಾಧಾಕೃಷ್ಣನ್ ದಮನಿ, ಗೋದ್ರೇಜ್ ಕುಟುಂಬ, ಲಕ್ಷ್ಮಿ ಮಿತ್ತಲ್ ಮತ್ತು ಕುಮಾರ ಮಂಗಲಂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News