ಯುಪಿಎಸ್‌ಸಿ ತೇರ್ಗಡೆಗೊಳ್ಳಲು ಇನ್ನೋರ್ವನ ಗುರುತು ಬಳಸಿಕೊಂಡ ಕಂದಾಯ ಅಧಿಕಾರಿ!

Update: 2019-10-11 17:30 GMT

ಹೊಸದಿಲ್ಲಿ, ಅ.11: 2007ರಲ್ಲಿ ನಡೆದ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಗೆ ಹಾಜರಾಗಲು ತನಗಿಂತ ಐದು ವರ್ಷ ಕಿರಿಯನಾಗಿರುವ ಇನ್ನೋರ್ವ ವ್ಯಕ್ತಿಯ ಗುರುತನ್ನು ಬಳಸಿಕೊಂಡಿದ್ದಾರೆಂಬ ಆರೋಪದಲ್ಲಿ ಭಾರತೀಯ ಕಂದಾಯ ಸೇವೆ (ಐಆರ್‌ಎಸ್)ಯ ಅಧಿಕಾರಿಯೊಬ್ಬರ ವಿರುದ್ಧ ಸಿಬಿಐ ಶುಕ್ರವಾರ ಪ್ರಕರಣ ದಾಖಲಿಸಿದೆ.

 2007ನೇ ಸಾಲಿನ ಕಸ್ಟಮ್ಸ್ ಹಾಗೂ ಕೇಂದ್ರೀಯ ಅಬಕಾರಿ ಇಲಾಖೆಯ ಐಆರ್‌ಎಸ್ ಅಧಿಕಾರಿಯಾಗಿರುವ ನವನೀತ್ ಕುಮಾರ್ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾಗುವುದಕ್ಕೆ ಅರ್ಹತೆಯನ್ನು ಪಡೆಯಲು ನಕಲಿ ಜನನ ಹಾಗೂ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.

ನವನೀತ್ ಕುಮಾರ್ ಅವರ ನಿಜವಾದ ಹೆಸರು ರಾಜೇಶ್ ಕುಮಾರ್ ಶರ್ಮಾ ಎಂದು ಶಂಕಿಸಲಾಗಿದೆ. 2007ರಲ್ಲಿ ನಡೆದ ಲೋಕಸೇವಾ ಆಯೋಗದ ಪರೀಕ್ಷೆಗೆ ಬರಯುವುದಕ್ಕೆ ಅರ್ಹತೆ ಹೊಂದುವುದಕ್ಕೆ ಅವರ ವಯೋಮಿತಿ ಮೀರಿರುವುದರಿಂದ ಆತ ತನಗಿಂತ ಐದು ವರ್ಷ ಕಿರಿಯವನಾದ ನವನೀತ್ ಕುಮಾರ್ ಎಂಬವರ ಹೆಸರಿನಲ್ಲಿ ಪರೀಕ್ಷೆ ಬರೆದಿದ್ದಾರೆಂದು ಸಿಬಿಐ ಅಧಿಕಾರಿಗಳು ಶಂಕಿಸಿದ್ದಾರೆ.

ನವನೀತ್ ಕುಮಾರ್ 1980ರ ಜೂನ್ 15ರಲ್ಲಿ ಜನಿಸಿದ್ದು, ಅವರು 1996ರಲ್ಲಿ ಹೈಸ್ಕೂಲ್ ಹಾಗೂ 2003 ಪದವಿಪೂರ್ವ ಮತ್ತು ಹಾಗೂ 2008ರಲ್ಲಿ ಪದವಿ ಶಿಕ್ಷಣವನ್ನು ಪಡೆದಿರುವುದಾಗಿ ಸಿಬಿಐ ಆರೋಪಿಸಿದೆ.

ರಾಜ್‌ಕುಮಾರ್ ಶರ್ಮಾ ಅವರು ಬೆಟ್ಟಿಯಾದ ಸಿಬಿಎಸ್‌ಇ ಪಠ್ಯಕ್ರಮದ ಶಾಲೆಯೊಂದರಲ್ಲಿ 1991ರಲ್ಲಿ 10ನೇ ಹಾಗೂ 1993ರಲ್ಲಿ 12ನೇ ತರಗತಿಯಲ್ಲಿ ತೇರ್ಗಡೆಗೊಂಡಿದ್ದರು ಎನ್ನಲಾಗಿದೆ.

 ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾಗಲು ರಾಜೇಶ್ ಶರ್ಮಾನ ವಯಸ್ಸು ದಾಟಿದ್ದರಿಂದ ಆತ ತನ್ನ ಹೆಸರನ್ನು ಬದಲಾಯಿಸಿ ಹಾಗೂ ನವನೀತ್ ಕುಮಾರ್‌ನ ಹೆಸರಿನಲ್ಲಿ ಪ್ರಮಾಣಪತ್ರ ಪಡೆದುಕೊಂಡಿದ್ದರು ಎಂದು ಸಿಬಿಐ ಆಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News