"ತಮಿಳುನಾಡಿನಲ್ಲಿ ಪ್ಲಾಸ್ಟಿಕ್ ನಿಷೇಧವಾಗಿದೆ ಎಂದು ಪ್ರಧಾನಿಗೆ ಯಾರಾದರೂ ಹೇಳಿ"

Update: 2019-10-12 14:23 GMT

ತಮಿಳುನಾಡಿನ ಮಾಮಲ್ಲಾಪುರಂನ ಸಮುದ್ರ ತೀರದಲ್ಲಿ ಶನಿವಾರ ಮುಂಜಾನೆ ಪ್ರಧಾನಿ ಮೋದಿಯವರು ಕಸಗಳನ್ನು ಹೆಕ್ಕುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಸುಮಾರು 30 ನಿಮಿಷಗಳ ಕಾಲ ಮೋದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

ಆದರೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ ಪ್ಲಾಸ್ಟಿಕ್ ಚೀಲವೊಂದನ್ನು ಬಳಸಿರುವುದು ಇದೀಗ ಚರ್ಚೆಯನ್ನು ಹುಟ್ಟುಹಾಕಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಜರ್ಶದ್ ಎನ್ ಕೆ ಎಂಬವರು, "ಚೆನ್ನೈಯಿಂದ ಮಹಾಬಲಿಪುರಂವರೆಗಿನ ರಸ್ತೆಗಳು ಸ್ವಚ್ಛವಾಗಿದೆ. ಆದರೆ ಪ್ರಧಾನಿ ತಂಗಿರುವ ಪ್ರದೇಶದ ಸಮೀಪದ ಕಡಲತೀರ ಕಸಗಳಿಂದ ತುಂಬಿದೆ. ಅವರು ಕಸಗಳನ್ನು ಸಂಗ್ರಹಿಸಲು ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ತಮಿಳುನಾಡಿನಲ್ಲಿ ಪ್ಲಾಸ್ಟಿಕ್ ನಿಷೇಧಗೊಂಡಿದೆ ಎಂದು ಯಾರಾದರೂ ಅವರಿಗೆ ಹೇಳಿಬಿಡಿ" ಎಂದಿದ್ದಾರೆ.

ಈ ಬಗ್ಗೆ ವ್ಯಕ್ತವಾಗಿರುವ ಕೆಲ ಪ್ರತಿಕ್ರಿಯೆಗಳು ಈ ಕೆಳಗಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News