ಆರ್‌ಟಿಐ ಅರ್ಜಿ ದಾಖಲಿಸುವ ಅಗತ್ಯ ಕಡಿಮೆಯಾಗಿದೆ : ಅಮಿತ್ ಶಾ

Update: 2019-10-12 16:59 GMT

 ಹೊಸದಿಲ್ಲಿ, ಅ.12: ಮಾಹಿತಿ ಹಕ್ಕು ಅರ್ಜಿ(ಆರ್‌ಟಿಐ) ದಾಖಲಿಸುವ ಅಗತ್ಯವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸರಕಾರಿ ವಲಯದಲ್ಲಿ ನಡೆಯುವ ಎಲ್ಲಾ ಪ್ರಕ್ರಿಯೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಲು ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

  ಕೇಂದ್ರ ಮಾಹಿತಿ ಆಯೋಗ(ಸಿಐಸಿ)ಯ 14ನೇ ವಾರ್ಷಿಕ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿದ್ದ ಅಮಿತ್ ಶಾ, ಆರ್‌ಟಿಐ ಕಾಯ್ದೆಯು ಸರಕಾರ ಮತ್ತು ಜನರ ನಡುವಿನ ಸಂಪರ್ಕ ಸೇತುವಾಗಿದೆ. ಈ ಕಾಯ್ದೆಯನ್ನು ರೂಪಿಸಿದ ಆರಂಭದಲ್ಲಿ ಇದರ ದುರ್ಬಳಕೆಯಾಗಬಹುದು ಎಂಬ ಭಯವಿತ್ತು. ಆದರೆ ಆರ್‌ಟಿಐ ಕಾಯ್ದೆಯಿಂದ ಅನಾನುಕೂಲಕ್ಕಿಂತ ಅನುಕೂಲವೇ ಹೆಚ್ಚು ಎಂಬುದು ಕಳೆದ 15 ವರ್ಷದಿಂದ ಸಾಬೀತಾಗಿದೆ.

 ಪ್ರಧಾನಿ ಮೋದಿ ಸರಕಾರ ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದ್ದು ಸರಕಾರಿ ವಲಯದ ಎಲ್ಲಾ ಕಾರ್ಯಗಳ ಮಾಹಿತಿಯನ್ನೂ ಜನತೆಗೆ ಶೀಘ್ರ ತಲುಪಿಸುವ ಉಪಕ್ರಮ ಆರಂಭಿಸಿದೆ. ಆದ್ದರಿಂದ ಜನರು ಆರ್‌ಟಿಐ ದಾಖಲಿಸುವ ಅಗತ್ಯವೇ ಇಲ್ಲದಂತಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News