ಭಾರತದ ಮಹಿಳಾ ತಂಡ ಪ್ರಕಟಿಸಿದ ಹಾಕಿ ಇಂಡಿಯಾ

Update: 2019-10-12 18:13 GMT

ಹೊಸದಿಲ್ಲಿ, ಅ.12: ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ಅ.14ರಿಂದ ಆರಂಭವಾಗಲಿರುವ ಹಿರಿಯ ಮಹಿಳೆಯರ ರಾಷ್ಟ್ರೀಯ ಶಿಬಿರಕ್ಕೆ 22 ಆಟಗಾರ್ತಿಯರನ್ನು ಒಳಗೊಂಡ ತಂಡವನ್ನು ಹಾಕಿ ಇಂಡಿಯಾ ಶನಿವಾರ ಆಯ್ಕೆ ಮಾಡಿದೆ.

ಮುಂದಿನ ತಿಂಗಳು ನ.1 ಹಾಗೂ 2ರಂದು ಅಮೆರಿಕದಲ್ಲಿ ನಡೆಯಲಿರುವ ನಿರ್ಣಾಯಕ ಎಫ್‌ಐಎಚ್ ಒಲಿಂಪಿಕ್ಸ್ ಕ್ವಾಲಿಫೈಯರ್‌ಗೆ ಮೊದಲು ಈ ಶಿಬಿರವನ್ನು ಏರ್ಪಡಿಸಲಾಗಿದೆ. 2 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ತಂಡ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿದೆ. ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದಲ್ಲಿ ರಾಣಿ ರಾಂಪಾಲ್ ನೇತೃತ್ವದ ಭಾರತೀಯ ಹಾಕಿ ತಂಡ ಗ್ರೇಟ್ ಬ್ರಿಟನ್ ವಿರುದ್ಧದ ಮೊದಲ ಪಂದ್ಯವನ್ನು 2-1 ಜಯ ಸಾಧಿಸಿದ್ದರೆ, ಉಳಿದ 3 ಪಂದ್ಯಗಳಲ್ಲಿ 1-1, 0-0, 2-2 ಅಂತರದಿಂದ ಡ್ರಾ ಸಾಧಿಸಿತ್ತು. ಒಂದು ಪಂದ್ಯದಲ್ಲಿ 1-3 ಅಂತರದಿಂದ ಸೋತಿತ್ತು.

 ಭಾರತದ ಮಹಿಳಾ ಹಾಕಿ ತಂಡ: ಸವಿತಾ, ರಜಿನಿ ಎಟಿಮುರ್ಪು, ದೀಪ್ ಗ್ರೇಸ್ ಎಕ್ಕಾ, ರೀನಾ ಖೋಖರ್, ಸಲಿಮಾ ಟೇಟೆ, ಗುರ್ಜಿತ್ ಕೌರ್, ಉದಿತಾ, ನಿಕ್ಕಿ ಪ್ರಧಾನ್, ನಿಶಾ, ಸುಶೀಲಾ ಚಾನು,ಮೋನಿಕಾ, ಲಿಲಿಮಾ ಮಿಂಝ್, ನೇಹಾ ಗೋಯಲ್, ನಮಿತಾ ಟೊಪ್ಪೊ, ಸೋನಿಕಾ ರಾಣಿ, ನವನೀತ್ ಕೌರ್, ಲಾಲ್‌ರೆಂಸಿಯಾಮಿ, ನವಜೋತ್ ಕೌರ್, ಶರ್ಮಿಳಾ ದೇವಿ, ಜ್ಯೋತಿ, ವಂದನಾ ಕಟಾರಿಯಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News