ಪುತ್ತೂರು: ಮರ್ಹೂಮ್ ಹಂಝ ಅಫ್ನಾನ್ ಸ್ಮರಣಾರ್ಥ ರಕ್ತದಾನ ಶಿಬಿರ

Update: 2019-10-13 05:06 GMT

ಪುತ್ತೂರು : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ಎಚ್.ಡಿ.ಎಫ್.ಸಿ ಬ್ಯಾಂಕ್ ಮಂಗಳೂರು, ಅಧಿಕೃತ ಪ್ರಾಯೋಜಕರು) ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಶನಿವಾರ ನಡೆಯಿತು.

ಸಭಾ ಕಾರ್ಯಕ್ರಮವನ್ನು ಎಸ್.ಡಿ.ಪಿ.ಐ ಪುತ್ತೂರು ನಗರ ಸಮಿತಿಯ ಅಧ್ಯಕ್ಷ ಬಶೀರ್ ಕೂರ್ನಡ್ಕ ಅಧ್ಯಕ್ಷತೆಯಲ್ಲಿ ರಾಮಕೃಷ್ಣ ಹೆಣ್ಣು ಮಕ್ಕಳ ಫ್ರೌಡ ಶಾಲೆ ಪುತ್ತೂರು ಇದರ ಸಂಚಾಲಕರಾದ ಹೇಮನಾಥ ಶೆಟ್ಟಿ ಉದ್ಘಾಟಿಸಿ, ಶುಭ ಹಾರೈಸಿದರು.

ದುಃವಾಶೀರ್ವಚನ ನೆರವೇರಿಸಿ ಮಾತನಾಡಿದ ಮಜ್ಲಿಸುನ್ನೂರ್ ಜುಮಾ ಮಸೀದಿ ಬಪ್ಪಳಿಗೆ ಖತೀಬ್ ಅಹ್ಮದ್ ನಯೀಮ್ ಫೈಝಿ "ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ದೇವರು ನಮಗೆ ಸಹಾಯ ಮಾಡುತ್ತಾನೆ. ವಿಶಾಲ ಮನೋಭಾವದ ಜನರು ಸಮಾಜಕ್ಕೆ ಅವಶ್ಯಕತೆ ಇದೆ" ಎಂದ ಅವರು, ಈ ಶಿಬಿರ ಒಂದು ಮಾದರಿ ಕಾರ್ಯಕ್ರಮ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗೀಪೇಟೆ ಮಾತನಾಡಿ, "ಹಂಝ ಅಫ್ನಾನ್  ಇತರರಿಗೋಸ್ಕರ ಜೀವಿಸಲು ಪ್ರಯತ್ನ ಪಟ್ಟವರು. ಅವರು ಎಲ್ಲರ ಮಧ್ಯೆ ಬೆರೆತು ಜೀವಿಸಿದವರು. ಜಾತಿ ಮತ ಬೇಧ ಬಿಟ್ಟು ಸೇವೆ ಮಾಡಿದ ವ್ಯಕ್ತಿತ್ವ ಅವರದು" ಎನ್ನುತ್ತಾ ಅವರ ಜೀವನ ಚರ್ಯೆಯಲ್ಲಿ ಅಳವಡಿಸಿದ ಸಾಮಾಜಿಕ ಕಳಕಳಿಯನ್ನು ಸ್ಮರಿಸುತ್ತಾ ಹಂಝರವರು ಇಹಲೋಕ ತ್ಯಜಿಸಿದಾಗ ಇಡೀ ಪುತ್ತೂರು ಪ್ರದೇಶವು ಜಾತಿ ಮತ ಭೇದವಿಲ್ಲದೆ ಕಣ್ಣೀರು ಹರಿಸಿ ಕಂಬನಿ ಮಿಡಿದಿದ್ದರು ಎಂದರು.

ವೇದಿಕೆಯಲ್ಲಿ ಇಬ್ರಾಹಿಂ ಗೊಳಿಕಟ್ಟೆ, ಜಾಬಿರ್ ಅರಿಯಡ್ಕ, ಹಾಜಿ ಇಬ್ರಾಹಿಂ ಸಾಗರ್, ಜುನೈದ್ ಪಿ.ಕೆ, ಫಾತಿಮತ್ ಝೊಹರಾ, ಇಮ್ರಾನ್ ಮದಕ, ಸಫ್ವಾನ್ ಸಾಬಿತ್, ಶಾಫಿ ಮುಹಾದ್, ಎಂ.ಎಸ್ ಶಫೀಕ್, ಬಾತೀಷ್ ಅಳಕೆಮಜಲು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.

ರಕ್ತದಾನ ಶಿಬಿರದಲ್ಲಿ 84 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು. ಅಶ್ರಫ್ ಅರಬಿ ಕಲ್ಲಡ್ಕ  ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News