ಮಂಗಳೂರಿನಲ್ಲಿ ‘ಡೆಕ್ಕನ್ ಕಾರ್ಪೆಟ್ಸ್’ ಶುಭಾರಂಭ

Update: 2019-10-13 07:38 GMT

ಮಂಗಳೂರು, ಅ.13: ಕಾರ್ಪೆಟ್, ಮ್ಯಾಟ್ ಹಾಗೂ ಪೀಠೋಪಕರಣಗಳ ನೂತನ ಬೃಹತ್ ಮಳಿಗೆ ‘ಡೆಕ್ಕನ್ ಕಾರ್ಪೆಟ್ಸ್’ ನಗರದ ಪಾಂಡೇಶ್ವರದ ಆರ್‌ಟಿಒ ಸಮೀಪದ ಪ್ಯಾರಡಿಜ್ಮ್ ಪ್ಲಾಝಾದಲ್ಲಿ ರವಿವಾರ ಬೆಳಗ್ಗೆ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಯೆನೆಪೊಯ ವಿವಿ ಕುಲಪತಿ ವೈ. ಅಬ್ದುಲ್ಲಾ ಕುಂಞಿ ಉದ್ಘಾಟಿಸಿ ಮಾತನಾಡಿ, ಡೆಕ್ಕನ್ ಪ್ಲಾಸ್ಟ್ ಸಂಸ್ಥೆಯು ಕರಾವಳಿ ಪ್ರದೇಶದಲ್ಲಿ ವೇಗವಾಗಿ ಬೆಳೆಯಿತು. ಅದರ ಅಧೀನದಲ್ಲಿ ಡೆಕ್ಕನ್ ಕಾರ್ಪೆಟ್ಸ್ ಆರಂಭಿಸಲಾಗಿದೆ. ನವ ಉದ್ಯಮಕ್ಕೆ ಯುವಕರು ನಾಂದಿ ಹಾಡಿದ್ದು, ಸಂಸ್ಥೆಯು ಮೇರುಸ್ಥಾನ ಪಡೆದು ಯಶಸ್ಸುಗಳಿಸಲಿ ಎಂದು ಶುಭ ಹಾರೈಸಿದರು.

‘ಹಾಸಿಗೆ’ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಬೃಹತ್ತಾಗಿ ಬೆಳೆಯುತ್ತಿರುವ ಮಂಗಳೂರಿಗೆ ಆಧುನಿಕ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಅಗತ್ಯ. ಈಗ ಎಲ್ಲೆಡೆ ಕಾರ್ಪೆಟ್ಸ್ ಬಳಸಲಾಗುತ್ತಿದೆ. ಯುವಕರಿಗೆ ಉತ್ಸಾಹವೊಂದಿದ್ದರೆ ಎಂತಹ ಉದ್ಯೋಗವನ್ನಾದರೂ ಮಾಡಬಲ್ಲರು. ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ಉದ್ಯಮದಲ್ಲಿ ತಾಳ್ಮೆ ಬಹು ಮುಖ್ಯ. ಮಳಿಗೆಗೆ ಬರುವ ಗ್ರಾಹಕರನ್ನು ತೃಪ್ತಿ ಪಡಿಸುವ ಗುಣವಿದ್ದರೆ ಯಶಸ್ಸು ನಿಶ್ಚಿತ ಎಂದು ಹೇಳಿದರು.

ಫರ್ನಿಚರ್ ಸೆಕ್ಷನ್ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ನಿರಂತರ ಶ್ರಮ ಮತ್ತು ಬದ್ಧತೆಯಿಂದ ಮಾತ್ರ ಉದ್ಯಮ ಯಶಸ್ವಿಯಾಗಲು ಸಾಧ್ಯ. ಅಂತಹ ಎಲ್ಲ ಗುಣಗಳು ಮಳಿಗೆಯ ಮಾಲಕ ಅಸ್ಗರ್‌ ಅಲಿ ಹಾಗೂ ಅವರ ಕುಟುಂಬಕ್ಕಿದೆ. ‘ಡೆಕ್ಕನ್ ಕಾರ್ಪೆಟ್ಸ್’ನಿಂದ ಆರಂಭವಾದ ಮಳಿಗೆಯು ಮುಂದಿನ ದಿನಗಳಲ್ಲಿ ಇಂತಹ ನೂರು ಮಳಿಗೆಗಳು ತೆರೆದುಕೊಳ್ಳಲಿ ಎಂದು ಶುಭ ಹಾರೈಸಿದರು.

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಮಾಜಿ ಶಾಸಕ ಮೊಯ್ದಿನ್ ಬಾವ, ವಿಜಯಕುಮಾರ್ ಶೆಟ್ಟಿ, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಪ್ರೊ. ಡಾ. ಯು.ಟಿ.ಇಫ್ತಿಕಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಆಝಾದ್ ಗ್ರೂಪ್‌ನ ಆಝಾದ್ ಮನ್ಸೂರ್ ಅಹ್ಮದ್, ಎ.ಕೆ. ಗ್ರೂಪ್ ಚೇರ್‌ಮನ್ ಎ.ಕೆ. ಅಹ್ಮದ್, ಮಳಿಗೆಯ ಮಾಲಕರಾದ ಅಸ್ಗರ್ ಅಲಿ, ಅಬ್ದುಲ್ ಬಶೀರ್, ಔಸಾಫ್ ಹುಸೈನ್, ಬಾಶಿತ್ ಹುಸೈನ್ ಮತ್ತಿತರರು ಉಪಸ್ಥಿತರಿದ್ದರು. ಅನುರಾಗ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬಗೆಬಗೆಯ ಪೀಠೋಪಕರಣ

ತುರ್ಕಿಸ್ತಾನ, ಚೀನಾದಿಂದ ಆಮದು ಮಾಡಲಾದ ಮಸೀದಿಗೆ ಹಾಸುವ ಕಾರ್ಪೆಟ್ಸ್, ನೆಲಹಾಸು, ಡೋರ್ ಮ್ಯಾಟ್, ವಿಭಿನ್ನ ಶೈಲಿ ಮತ್ತು ಅಳತೆಯ ಕಾರ್ಪೆಟ್‌ಗಳು, ವಾಶ್‌ರೂಂ ಅಗತ್ಯದ ಪರಿಕರಗಳು, ಡಸ್ಟ್ ಬಿನ್, ಬಾತ್ ಮ್ಯಾಟ್, ಹೊದಿಕೆಗಳು, ತಲೆದಿಂಬುಗಳು, ಶವರ್ ಟವೆಲ್, ಆರ್ಥೋಪೆಡಿಕ್ ಹಾಸಿಗೆ ಮತ್ತು ತಲೆದಿಂಬು, ಕಾಟ್, ಕುರ್ಚಿ, ಟೇಬಲ್, ಫ್ಯಾನ್ಸಿ ಐಟಂ, ಮಕ್ಕಳು ಬಳಸುವ ಕುರ್ಚಿ, ಕ್ಯಾಬಿನ್ಸ್, ಶೂ ರ್ಯಾಕ್ ಸೇರಿದಂತೆ ವಿವಿಧ ನಮೂನೆಯ ಪೀಠೋಪಕರಣಗಳು ಇಲ್ಲಿ ಲಭ್ಯ ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News