ಮುಸ್ಲಿಂ ಯುವ ವೇದಿಕೆ ಮಾರಿಪಳ್ಳ ವತಿಯಿಂದ ಉಚಿತ ಹಿಜಾಮ ಚಿಕಿತ್ಸಾ ಶಿಬಿರ

Update: 2019-10-13 08:06 GMT

ಫರಂಗಿಪೇಟೆ : ಮುಸ್ಲಿಂ ಯುವ ವೇದಿಕೆ ಮಾರಿಪಳ್ಳ ಹಾಗೂ ಆಯುಶ್ ಇಲಾಖೆ ದಕ ಜಿಲ್ಲೆ ಇದರ ಸಹಯೋಗದಲ್ಲಿ ಸುಜೀರು ಪ್ರೌಢ ಶಾಲೆಯಲ್ಲಿ ಉಚಿತ ಹಿಜಾಮ ಚಿಕಿತ್ಸೆ ನಡೆಯಿತು.

ಮಾರಿಪ್ಫಳ್ಳ ಮಸೀದಿ ಖತೀಬ್ ಗಿಡಕ್ಕೆ ನೀರು ಹಾಕುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮುಸ್ಲಿಂ ಯವ ವೇದಿಕೆಯ ಸಾಮಾಜಿಕ ಕಾಳಜಿಯ ಭಾಗವಾಗಿ ಇಂದು ನಡೆಯುವ ಹಿಜಾಮ ಚಿಕಿತ್ಸೆ ಕಾರ್ಯಕ್ರಮ ಶ್ಲಾಘನೀಯವಾಗಿದೆ,  ಹಿಜಾಮ ಚಿಕಿತ್ಸೆಯಿಂದ ದೇಹದಲ್ಲಿರುವ ಕೆಟ್ಟ ರಕ್ತ ತೆಗೆಯುವುದರಿಂದ ದೇಹದ ಆರೋಗ್ಯ ಮತ್ತು  ಕಾಂತಿಯನ್ನು ಹೆಚ್ಚಿಸಬಹುದು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಗ್ರಾಮಾಂತರ ಎಸ್.ಐ.ಪ್ರಸನ್ನ ಈ ಚಿಕಿತ್ಸೆ ಗೆ ಹಲವಾರು ವರ್ಷಗಳ ಇತಿಹಾಸವಿದ್ದು ಆರೋಗ್ಯ ದೃಷ್ಟಿಯಿಂದ ಉತ್ತಮ. ದೇಹದ ಸಾಮಾರ್ಥ್ಯಕ್ಕನುಗುಣವಾಗಿ ಚಿಕಿತ್ಸೆಯಲ್ಲಿ ಪಾಲ್ಗೊಳ್ಳಿ. ಆರೋಗ್ಯವಂತ ಸಮಾಜಕ್ಕಾಗಿ ಯುವ ವೇದಿಕೆಯ ಈ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು.

ಪುದು ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ‌ಡಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಉಮ್ಮರ್ ಫಾರೂಕ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಜಿಲ್ಲಾಧ್ಯಕ್ಷ ಹನೀಫ್ ಕಾಟಿಪ್ಪಳ್ಳ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪಿಎಫ್ಐ ಬಂಟ್ವಾಳ ಕಾರ್ಯದರ್ಶಿ ಸಲೀಮ್ ಕುಂಪನಮಜಲ್, ಪೆರಿಮಾರ್ ಮಸೀದಿಯ ಖತೀಬ್  ರಫೀಕ್ ಸಅದಿ ಅಲ್ ಅಪ್ಳಲಿ, ಮುಸ್ಲಿಂ ಯುವ ವೇದಿಕೆ ಅಧ್ಯಕ್ಷ ಎನ್.ಎಸ್.ನಿಸಾರ್ ಮಾರಿಪಳ್ಳ,  ಗ್ರಾ.ಪಂ.ಸದಸ್ಯರಾದ ಹಾಸೀರ್ ಪೆರಿಮಾರ್, ನಝೀರ್ ಕುಂಜತ್ಕಲ, ಇಕ್ಬಾಲ್ ಸುಜೀರ್ ಹಾಗೂ ಪ್ರಮುಖರಾದ ಅಬ್ದುಲ್ಲ ಎಂ‌ಕೆಬಿ, ಅಬೂಬಕರ್ ಮಾರಿಪಳ್ಳ, ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಅಬ್ದುಲ್ ಹಕೀಂ ಮಾರಿಪಳ್ಳ, ಶೌಕತ್ ಮಾರಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.

ಅಬ್ದುಸ್ಸಮದ್ ಖಿರಾಅತ್ ಪಠಿಸಿದರು, ಕಾರ್ಯಕ್ರಮ ದಲ್ಲಿ ರಮ್ಲಾನ್ ಮಾರಿಪಳ್ಳ, ಮಹಮ್ಮದ್ ತುಂಬೆ, ಡಾ ಮುಸ್ತಾಪ,  ಡಾ. ಮಹಮ್ಮದ್ ಇಕ್ಬಾಲ್ ಅವರನ್ನು ಗೌರವಿಸಲಾಯಿತು.

ವೇದಿಕೆಯ ಕಾರ್ಯದರ್ಶಿ ಅಶ್ರಫ್ ಮಲ್ಲಿ ಸ್ವಾಗತಿಸಿದರು. ಶಿಕ್ಷಕ ಮಹಮ್ಮದ್ ತುಂಬೆ ವಂದಿಸಿದರು. ಯುವ ನ್ಯಾಯವಾದಿ ಮುಹಮ್ಮದ್ ಗಝಾಲಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News