ಮಂಗಳೂರು: ಸಮುದ್ರ ಕಿನಾರೆಯಲ್ಲಿ ಅಪರಿಚಿತ ಮೃತದೇಹ ಪತ್ತೆ

Update: 2019-10-13 11:36 GMT

ಮಂಗಳೂರು, ಅ.13: ನಗರದ ಕಸ್ಬಾ ಬೆಂಗ್ರೆ ಸಮುದ್ರ ಕಿನಾರೆಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ.

50 ವರ್ಷದ ವ್ಯಕ್ತಿ ನೀರಿಗೆ ಬಿದ್ದು ಆಕಸ್ಮಿಕವಾಗಿ ಮೃತಟ್ಟಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತರು ಸ್ಥಳೀಯ ವ್ಯಕ್ತಿಯಾಗಿರುವ ಸಾಧ್ಯತೆ ಇದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದೆ.

ಚಹರೆ: ಸುಮಾರು 5.5 ಅಡಿ ಎತ್ತರ, ಉದ್ದ ಮುಖ, ಗೋಧಿ ಮೈಬಣ್ಣ, ಸದೃಢ ಶರೀರ, ಕಪ್ಪು ಬಿಳಿ ಮಿಶ್ರಿತ ಗಡ್ಡ ಹಾಗೂ ಕಪ್ಪು ಬಣ್ಣದ ತಲೆ ಕೂದಲು. ಕೇಸರಿ ಬಣ್ಣದ ಅರ್ಧ ತೋಳಿನ ಶರ್ಟ್ ಧರಿಸಿರುತ್ತಾರೆ. ವಾರಸುದಾರರು ಇದ್ದಲ್ಲಿ ಪಣಂಬೂರು ಠಾಣೆ (0824- 2220530) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News