ಪಜೀರು ಶ್ರೀ ಅರಸು ಮುಂಡಿತ್ತಾಯ ದೇವಸ್ಥಾನದ ಭಂಡಾರಮನೆಗೆ ಶಿಲಾನ್ಯಾಸ

Update: 2019-10-13 12:35 GMT

ಕೊಣಾಜೆ, ಅ.13: ದೇವಸ್ಥಾನದ ಭಂಡಾರಮನೆ ನಿರ್ಮಾಣ ಬಳಿಕ ಅದನ್ನು ತುಂಬಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಹತ್ತು ತಾಯಂದಿರ ಮಕ್ಕಳು ಒಂದಾಗಿ ಕೆಲಸ ಮಾಡಿದಾಗ ದೈವ ಸಂತುಷ್ಠಗೊಂಡು ಭಂಡಾರಮನೆ ತುಂಬಿ ತುಳುಕುವುದರಲ್ಲಿ ಸಂಶಯವಿಲ್ಲ ಎಂದು ಮುಡಿಪು ಅಮ್ಮೆಂಬಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ.ಜಿ.ರಾಜಾರಾಮ ಭಟ್ ಅಭಿಪ್ರಾಯಪಟ್ಟರು.

ಪಜೀರ್ ಗ್ರಾಮದ ಪ್ರಧಾನ ದೈವಗಳಾದ ಶ್ರೀ ಅರಸು ಮುಂಡಿತ್ತಾಯ ದೇವಸ್ಥಾನದ ಭಂಡಾರ ಮನೆಗೆ ರವಿವಾರ ಶಿಲಾನ್ಯಾಸಗಯದ ಬಳಿಕ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕ್ಷೇತ್ರದ ಆಡಳಿತ ಮೊಕ್ತೇಸರ ರಮೇಶ್ ಅಡಪ್ಪಪಜೀರುಗುತ್ತು ಶಿಲಾನ್ಯಾಸಗೈದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರದೀಪ್ ಆಳ್ವ ಅಜೆಕಳಗುತ್ತು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಪಜೀರ್‌ಗುತು, ಗ್ರಾಪಂ ಅಧ್ಯಕ್ಷ ಸೀತಾರಾಮ ಶೆಟ್ಟಿ, ಇನೋಳಿ ದೇವಂದಬೆಟ್ಟು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ ಕಿಲ್ಲೂರುಗುತ್ತು, ಹಿರಿಯರಾದ ಸೀತಾರಾಮ ಶೆಟ್ಟಿ, ಮಂಜುನಾಥ ಸಾಮಾನಿ, ಬೋಳಿಯಾರ್ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ತ್ಯಾಂಪಣ್ಣ ರೈ, ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಂಟ್ವಾಳ ತಾಪಂ ಸದಸ್ಯ ನವೀನ್ ಪಾದಲ್ಪಾಡಿ, ನಿವೃತ್ತ ಮುಖ್ಯ ಶಿಕ್ಷಕ ಸದಾಶಿವ ರೈ, ಸಮಿತಿಯ ಸಂಚಾಲಕ ಭರತ್‌ರಾಜ್ ಶೆಟ್ಟಿ ಪಜೀರ್‌ಗುತ್ತು, ಉಪಾಧ್ಯಕ್ಷ ಸುಧೀರ್ ರೈ, ರವಿ ರೈ ಪಜೀರ್, ಕೋಶಾಧಿಕಾರಿ ಕೆ.ಆರ್.ಗಟ್ಟಿ, ಕಾರ್ಯದರ್ಶಿ ಗಳಾದ ಮೋಹನ್ ಅಡ್ಕ, ಜಯರಾಜ್ ಭಂಡಾರಮನೆ, ಚಂದ್ರಹಾಸ ಗಾಣದಮನೆ, ಪ್ರಧಾನ ಅರ್ಚಕ ಸುಬ್ರಾಯ ಪೂಜಾರಿ, ದೈವ ನರ್ತಕ ಕಣಂತೂರು ಕಾಂತಪ್ಪ, ಇಂಜಿನಿಯರ್ ಸುರೇಶ್ ಕೊಂಡೆ, ಪದಾಧಿಕಾರಿಗಳಾದ ಜಗನ್ನಾಥ ಶೆಟ್ಟಿ ಅಜಕಳಗುತ್ತು, ಸೀತಾರಾಮ ಶೆಟ್ಟಿ ಅರುವ, ಶಶಿಧರ ಶೆಟ್ಟಿ ಬೆಳ್ಮಣ್, ಶಂಕರ ರೈ, ಮೋಹನ್ ರೈ, ಬಾಲಕೃಷ್ಣ ರೈ ಬಂಗದಾರೆಗುತ್ತು, ವಿಶ್ವಾಸ್ ರೈ ಬಂಗದಾರೆಗುತ್ತು, ಪ್ರಮೋದ್ ರೈ, ಅರುಣ್ ಶೆಟ್ಟಿ, ಪುರಂದರ, ಹರಿಶ್ಚಂದ್ರ ಅಡ್ಕ, ಸೀತಾರಾಮ ಮೇಸ್ತ್ರಿ, ಕುಬೇರಪ್ಪ ಮೇಸ್ತ್ರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News